ಪುತ್ತೂರು ಗಲಾಟೆ ಪ್ರಕರಣ: ಆರೋಪಿಯ ಮೇಲೆ ಹಿಂದೆಯೂ 2 ಪ್ರಕರಣ ದಾಖಲು
ಪುತ್ತೂರು: ದರ್ಬೆ ಅಂಗಡಿಯೊಂದರಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ದಸ್ತಗಿರಿಯಾಗಿರುವ ಪುತ್ತೂರು ಕಸಬಾ ನಿವಾಸಿ ಆರೋಪಿ ಸುದರ್ಶನ ಪೈ, ಪಿ (29) ಎಂಬವರ ವಿರುದ್ಧ ಈ ಹಿಂದೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 182/2025, ಕಲಂ 8(C) NDPS Act ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಲ್ಲದೇ, ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ: 87/2021, ಕಲಂ 307, 504 ಜೊತೆಗೆ 34 IPC ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಆ.21ರಂದು ಘಟನೆ ನಡೆದ ಸಂದರ್ಭದಲ್ಲಿ ಆರೋಪಿ ಸುದರ್ಶನ ಪೈ ಅವರ ತಂದೆ ಸದಾಶಿವ ಪೈ ಅವರು ಸ್ಥಳದಲ್ಲಿರಲಿಲ್ಲ. ಗಲಾಟೆ ನಡೆದ ಬಳಿಕ ಸ್ಥಳಕ್ಕೆ ಆಗಮಿಸಿ ಗಲಾಟೆಯನ್ನು ಬಿಡಿಸಲು ಪ್ರಯತ್ನಿಸಿರುತ್ತಾರೆ.
ಇನ್ನು, ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸಾರ್ವಜನಿಕರನ್ನು ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚಿಸಿದರೂ, ಅವರು ಸ್ಥಳದಿಂದ ತೆರಳದ ಹಿನ್ನೆಲೆಯಲ್ಲಿ ಲಘು ಪ್ರಮಾಣದ ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಲಾಗಿರುತ್ತದೆ.


