ಕರಾವಳಿಕ್ರೈಂ

ಅನುಮತಿ ಇಲ್ಲದೆ ರಸ್ತೆ ತಡೆ: ಅರುಣ್ ಪುತ್ತಿಲ ಸಹಿತ ಹಲವರ ವಿರುದ್ಧ  ಪ್ರಕರಣ ದಾಖಲು

ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆ-ಶಾಂತಿಗೋಡು ಆನಡ್ಕ ಕಡೆಗೆ ಹೋಗುವ ಮಾಯಂಗಳ ಎಂಬಲ್ಲಿ ರಸ್ತೆಯಲ್ಲಿ ಜು.27ರಂದು ಬೆಳಿಗ್ಗೆ ಕೆಲವು ಜನರು ಗುಂಪುಸೇರಿ ರಸ್ತೆಯನ್ನು ತಡೆಮಾಡಿ ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವುದಾಗಿ ಪುತ್ತೂರು ನಗರ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ ಸುರೇಶ್‌ ಸಿ ಟಿ ರವರಿಗೆ ಮಾಹಿತಿ ಬಂದ ಮೇರೆಗೆ, ಸದ್ರಿಯವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸ್ಥಳದಲ್ಲಿ ಅರುಣ್ ಕುಮಾರ್ ಪುತ್ತಿಲ, ಮನೀಶ್ ಕುಲಾಲ್, ಅವಿನಾಶ್ ಜೋಗಿ, ಪ್ರೇಮರಾಜ್, ಪ್ರತೀಕ್ ಪುತ್ತಿಲ, ಶ್ರೀರಾಂಪಾತಾಳ, ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ, ರವಿಕುಮಾರ್ ರೈ, ಜಗದೀಶ್ ರೈ, ಪ್ರಶಾಂತ ನೆಕ್ಕಿಲಾಡಿ ಎಂಬವರುಗಳು ಹಾಗೂ ಇತರರು ಸೇರಿದಂತೆ ಸುಮಾರು 25 ರಿಂದ 30 ಜನರು ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಯಾವುದೇ ಪೂರ್ವಾನುಮತಿ ಪಡೆಯದೇ ಅನಧಿಕೃತವಾಗಿ ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿರುವುದು ಕಂಡು ಬಂದಿದದ್ದು ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 93/2026 ಕಲಂ:  189(2), 126(2)  ಬಿ.ಎನ್ ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

 

Leave a Reply

Your email address will not be published. Required fields are marked *

error: Content is protected !!