ಪುತ್ತೂರು ಸುನ್ನೀ ಫೌಂಡೇಶನ್ ವತಿಯಿಂದ ಇಲಲ್ ಹಬೀಬ್ ಮೌಲಿದ್ ಮಜ್ಲಿಸ್
ಪುತ್ತೂರು: ಬದಲಾಗುತ್ತಿರುವ ಯುವಜನತೆಯ ಮನಸ್ಸನ್ನು ಅರಿತು ಧಾರ್ಮಿಕ ಬೋಧನೆ ನಡೆಸುವ ಮೂಲಕ ಪ್ರವಾದಿಯವರ ಮಾದರಿಯನ್ನು ಅನುಸರಿಸಲು ಪ್ರೇರೇಪಿಸಬೇಕಾಗಿದೆ ಎಂದು ಎಂದು ಕರ್ನಾಟಕ ಜಂಇಯ್ಯತುಲ್ ಉಲಮಾದ ಪ್ರಮುಖ ನಾಯಕ ಬಿ.ಕೆ ಮುಹಮ್ಮದ್ ಅಲಿ ಫೈಝಿ ಬಾಳೆಪುಣಿ ಹೇಳಿದರು.

ಪುತ್ತೂರು ಸುನ್ನೀ ಫೌಂಡೇಶನ್ ವತಿಯಿಂದ ಬನ್ನೂರು ತಾಜುಲ್ ಉಲಮಾ ಸುನ್ನೀ ಸೆಂಟರ್ನಲ್ಲಿ ನಡೆದ ಇಲಲ್ ಹಬೀಬ್ ಮೌಲೀದ್ ಮಜ್ಲಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ಸುನ್ನೀ ಫೌಂಡೇಶನ್ ಉಪಾಧ್ಯಕ್ಷ ಕೆ.ಇ. ಅಬೂಬಕ್ಕರ್ ನೆಲ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಉಪದೇಶ ನೀಡಿದರು. ಅಬೂಬಕ್ಕರ್ ಸಅದಿ ಮಜೂರು ಶುಭ ಹಾರೈಸಿದರು. ವೇದಿಕೆಯಲ್ಲಿ ಖಾದರ್ ಮುಸ್ಲಿಯಾರ್ ಕುಂತೂರು, ಅಝೀಝ್ ಮುಸ್ಲಿಯಾರ್ ಮಾಡಾವು, ಕುಂಞಿಅಹ್ಮದ್ ಮುಸ್ಲಿಯಾರ್, ಮುಹಮ್ಮದ್ ಮದನಿ ಬನ್ನೂರು, ಕಾಸಿಂ ಮುಸ್ಲಿಯಾರ್, ಅಬ್ದುರ್ರಹ್ಮಾನ್ ಮದನಿ, ರಝಾಕ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.


