ಕೂರ್ನಡ್ಕ ವಾಫಿಯಾ ಕಾಲೇಜಿನ ಅಧ್ಯಕ್ಷರಾಗಿ ಕೆ ಎಂ ಅಬ್ದುಲ್ ಖಾದರ್ ಪುನರಾಯ್ಕೆ
ಪುತ್ತೂರು: ಕೂರ್ನಡ್ಕ ಪೀರ್ ಮೊಹಲ್ಲಾ ಮುಹಿಯದ್ದೀನ್ ಜುಮಾ ಮಸೀದಿಯ ಅಧೀನದಲ್ಲಿರುವ ವಾಫಿಯಾ ಕಾಲೇಜಿನ ಆಡಳಿತ ಮಂಡಳಿ ಸಭೆ ಸೆ.10ರಂದು ಮದ್ರಸ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ರಿಯಾಝ್ ಹಾಜಿ ವಹಿಸಿದ್ದರು.
ವಾಫಿಯಾ ಕಾಲೇಜಿನ ಅಧ್ಯಕ್ಷ ಕೆ.ಎಂ. ಅಬ್ದುಲ್ ಖಾದರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅದೇ ರೀತಿ ಕಾಲೇಜಿನ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಅಭಿವೃದ್ಧಿಯ ಕುರಿತು ವಿವರಿಸಿದರು.
ಜಮಾಅತ್ ಕಾರ್ಯದರ್ಶಿ ಎಂ.ಎಂ. ಅಬ್ದುಲ್ ಅಝೀಝ್ ಅವರು ಮಾತನಾಡಿ, ವಾಫಿಯಾ ಕಾಲೇಜನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಸಹಕಾರದೊಂದಿಗೆ ಮುಂದೆ ಸಾಗಬೇಕಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಎಂ. ಅಬ್ದುಲ್ ಖಾದರ್ ಅವರನ್ನೇ ಮುಂದುವರಿಸಲು ಎಲ್ಲರೂ ಸರ್ವಾನುಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನ ಪದಾಧಿಕಾರಿಗಳಾಗಿ ಕೆಳಗಿನವರನ್ನು ಆಯ್ಕೆ ಮಾಡಲಾಯಿತು:
* ಅಧ್ಯಕ್ಷರು: ಕೆ.ಎಂ. ಅಬ್ದುಲ್ ಖಾದರ್
* ಉಪಾಧ್ಯಕ್ಷರು: ಹನೀಫ್ ಮಧುರಾ
* ಕಾರ್ಯದರ್ಶಿ: ಕೆ.ಎ. ಅಬ್ದುಲ್ ರಝಾಕ್ ಹಾಜಿ
* ಕೋಶಾಧಿಕಾರಿ: ಆದಂ ಮುಕ್ರಂಪಾಡಿ
* ವಿಶೇಷ ಸದಸ್ಯರು: ಜಮಾತ್ ಅಧ್ಯಕ್ಷರಾದ ರಿಯಾಜ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಂ ಎಂ ಅಬ್ದುಲ್ಅಝೀಝ್,
* ಸದಸ್ಯರು ಅಬೂಬಕರ್ ಪಿ.ಸಿ.ಎನ್., ಅಬ್ದುಲ್ ರಹಿಮಾನ್ ಕಬಕ , ಇಸ್ಮಾಯಿಲ್ ಕೆನರಾ, ಫಾರೂಕ್ L.T., ಸಿರಾಜ್ ಎ ಕೆ.
ಸಭೆಯಲ್ಲಿ ಜಮಾಅತ್ ಸಮಿತಿಯ ಸದಸ್ಯರು ಹಾಗೂ ವಾಫಿಯಾ ಕಾಲೇಜಿನ ಸದಸ್ಯರು ಉಪಸ್ಥಿತರಿದ್ದರು.
ಜಮಾಅತ್ ಕಾರ್ಯದರ್ಶಿ ಎಂ.ಎಂ. ಅಬ್ದುಲ್ ಅಝೀಝ್ ವಂದಿಸಿದರು.


