ಕರಾವಳಿಕ್ರೈಂ

ಸುಬ್ರಹ್ಮಣ್ಯ: ಲಾಡ್ಜ್‌ನಲ್ಲಿ ತಂಗಿದ್ದ ಯುವಕ ಆತ್ಮಹತ್ಯೆ



ಕಡಬ: ಸುಬ್ರಹ್ಮಣ್ಯ ಸಮೀಪದ ಅಜ್ಜಿಹಿತ್ಲುವಿನ ಲಾಡ್ಜ್‌ನಲ್ಲಿ ತಂಗಿದ್ದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ

ರಾಮನಗರ ಜಿಲ್ಲೆಯ ಉಚ್ಚಮ್ಮನದೊಡ್ಡಿ ನಿವಾಸಿ ಮಧು ಎಸ್ (30) ಅವರು ಜುಲೈ 8ರಂದು ಅಜ್ಜಿಹಿತ್ಲುವಿನ ಲಾಡ್ಜ್‌ನಲ್ಲಿ ಕೊಠಡಿ ಬಾಡಿಗೆಗೆ ಪಡೆದು ತಂಗಿದ್ದರು. ಜು.9ರಂದು ಸಂಜೆ ಅವರಿದ್ದ ಕೊಠಡಿಯ ಬಾಗಿಲು ತೆರೆಯುವಂತೆ ಸೂಚಿಸಿದಾಗ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಕಿಟಕಿಯ ಮೂಲಕ ಪರಿಶೀಲಿಸಿದಾಗ, ಕೊಠಡಿಯೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

 


ಲಾಡ್ಜ್‌ನ ಲೀಝುದಾರ ಜಗದೀಶ್ ಪಡ್ಪು (51) ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!