ಕರಾವಳಿಕ್ರೈಂ

ಅಪ್ರಾಪ್ತ ಬಾಲಕರಿಗೆ ಚಲಾಯಿಸಲು ದ್ವಿಚಕ್ರ ವಾಹನ ನೀಡಿದ ಮಾಲೀಕರಿಗೆ ತಲಾ 25,000 ರೂ ದಂಡ ವಿಧಿಸಿದ  ನ್ಯಾಯಾಲಯ




ಬಂಟ್ವಾಳ: ಎ.6 ರಂದು ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಮೆಲ್ಕಾರ್‌ ನಲ್ಲಿ ದ್ವಿಚಕ್ರ ವಾಹನವನ್ನು ಹಾಗೂ ಎ.28ರಂದು ಬಿಸಿ ರೋಡ್‌ ನಲ್ಲಿ ಬಳಿ ದ್ವಿಚಕ್ರ ವಾಹನವನ್ನು  ಅಪ್ರಾಪ್ತ ಬಾಲಕರು ಚಾಲನೆ ಮಾಡಿರುವುದು ಬಂಟ್ವಾಳ ಸಂಚಾರ ಠಾಣಾ ಪೊಲೀಸರು ವಾಹನ ತಪಾಸಣೆಯ ವೇಳೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕರಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ಸದ್ರಿ ವಾಹನಗಳ ಮಾಲಿಕರ ವಿರುದ್ದ ಬಂಟ್ವಾಳ ಸಂಚಾರ ಠಾಣಾ ಪೊಲೀಸರು ಕಲಂ:199(A) IMV ಅಡಿಯಲ್ಲಿ ಎಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ದೋಷಾರೋಣ ಪತ್ರ ಸಲ್ಲಿಸಿದ್ದರು.

ಮೇ.18ರಂದು ಎರಡೂ ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾಲಯವು ಎರಡೂ ವಾಹನದ ಮಾಲೀಕರಿಗೆ ತಲಾ ರೂ.25,000/- ದಂಡ ವಿಧಿಸಿ ಆದೇಶಿಸಿದೆ.

 

Leave a Reply

Your email address will not be published. Required fields are marked *

error: Content is protected !!