ಕರಾವಳಿಕ್ರೈಂ

ವಿಟ್ಲ: ಪರವಾನಿಗೆಯ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ಆರೋಪ-ಪ್ರಕರಣ ದಾಖಲು

ವಿಟ್ಲ: ಮೇ.14ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ಅಳಿಕೆ ಗ್ರಾಮದ ಕೋಟೆ ಎಂಬಲ್ಲಿ ಪರವಾನಿಗೆಯ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದಾಗಿ ವಿಟ್ಲ ಪೊಲೀಸ್ ಠಾಣಾ  ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ರವರಿಗೆ ಮಾಹಿತಿ ಬಂದ ಮೇರೆಗೆ, ಸದ್ರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಗಣಿಗಾರಿಕೆಗೆ ಸಂಬಂಧಿಸಿದ ದಾಖಲಾತಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಪರಿಶೀಲಿಸಿದಾಗ, ಕೆಂಪುಕಲ್ಲು ಗಣಿಗಾರಿಕೆಯ ಪರವಾನಿಗೆಯು ದಿನಾಂಕ: 29.04.2026 ರಂದು ಮುಕ್ತಾಯಗೊಂಡಿರುವುದು ಧೃಢಪಟ್ಟಿದ್ದು, ಸದ್ರಿ ಪರವಾನಿಗೆ ಪತ್ರದಲ್ಲಿ ನಮೂದಿಸಲಾಗಿದ್ದ ದಿನಾಂಕವನ್ನು 29.05.2026 ಎಂಬುದಾಗಿ ತಿದ್ದಿರುವುದಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿತನಾದ ಬಂಟ್ವಾಳ ಮೇರಮಜಲು ನಿವಾಸಿ  ರಂಜೀತ್ ಕುಮಾರ್ ಎಂಬಾತನ ವಿರುದ್ದ ಮೇ.15ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ 110/2026, ಕಲಂ: 318(4), 336(3)  BNS 2023, ಕಲಂ: 4(1), 4(1A), 21 MMDR Act 1957, ಕಲಂ: 3,44 KMMC Rule 1994 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

 

Leave a Reply

Your email address will not be published. Required fields are marked *

error: Content is protected !!