ಇಂದು ಅಲ್ ಮಾಹಿರಾ ಪದವಿ ಕೋರ್ಸ್ ಗೆ ಇಂಟರ್ ವ್ಯೂ

ಪುತ್ತೂರು: ಸಮಾಜಕ್ಕೆ ಅತ್ಯಧಿಕ ಆಲಿಮಾತ್ ಗಳನ್ನು ಸಮರ್ಪಿಸಿದ,ನೂರಾರು ಮಹಿಳಾ ಶರೀಅತ್ ಕಾಲೇಜುಗಳಲ್ಲಿ ಪ್ರಾಂಶುಪಾಲರು,ಟೀಚರ್ಸ್ ಗಳಾಗಿ ದುಡಿಯುತ್ತಿರುವ ಸಮರ್ಥ ಅಲ್ ಮಾಹಿರಾ ಪದವೀಧರೆಯರನ್ನು ಸಮಾಜಕ್ಕೆ ಅರ್ಪಿಸಿದ ಕುಂಬ್ರದ ಮರ್ಕಝುಲ್ ಹುದಾ ಅಲ್ ಮಾಹಿರಾ ಪದವಿ ವಿಭಾಗ ಇದೀಗ ಇಸ್ಲಾಮಿಕ್ ಸಬ್ಜೆಕ್ಟ್ ಗಳೊಂದಿಗೆ ಕಂಪ್ಯೂಟರ್, ಫ್ಯಾಷನ್ ಡಿಸೈನ್,ಸ್ಪೋಕನ್ ಇಂಗ್ಲಿಷ್, ಪ್ರೀ- ಮ್ಯಾರಿಟಲ್ ಕೋರ್ಸ್ ಮುಂತಾದ ಉಪಯುಕ್ತ ,ಬೇಡಿಕೆಯ ಕೋರ್ಸ್ ಗಳೂ ಸೇರ್ಪಡೆಗೊಂಡು ಇನ್ಸ್ಟಿಟ್ಯೂಟ್ ಆಫ್ ಥಿಯೋಲಜಿ ಅಧೀನದಲ್ಲಿ ಕಾರ್ಯಾಚರಿಸಲಿದ್ದು ಸದ್ರಿ ವಿಭಾಗಕ್ಕೆ ಸೇರ ಬಯಸುವ ವಿದ್ಯಾರ್ಥಿನಿಯರಿಗೆ ಇಂದು ದಿನಾಂಕ 6 ಮೇ 2026 ಬೆಳಿಗ್ಗೆ 9.30 ರಿಂದ 1.30 ತನಕ ದಾಖಲಾತಿ ನಡೆಯಲಿದೆ.
ಆಸಕ್ತ ವಿದ್ಯಾರ್ಥಿನಿಯರು ಪೋಷಕರೊಂದಿಗೆ ಆಗಮಿಸಿ ಇಂಟರ್ ವ್ಯೂ ನಲ್ಲಿ ಪಾಲ್ಗೊಳ್ಳಬೇಕಾಗಿ ಮೀಡಿಯಾ ಮರ್ಕಝ್ ಪ್ರಕಟಣೆಯಲ್ಲಿ ತಿಳಿಸಿದೆ.




