ಕಡಬ: ಚೆನ್ನಪ್ಪ ಪೂಜಾರಿ ಸಾವು ಪ್ರಕರಣಕ್ಕೆ ತಿರುವು; ಕೇಸ್ ದಾಖಲು
ಕಡಬ: ಇಲ್ಲಿನ ಕಡ್ಯ ನಿವಾಸಿ ಚೆನ್ನಪ್ಪ ಪೂಜಾರಿ ಅವರ ನಿಗೂಢ ಸಾವು ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದ್ದು, ಡೆತ್ ನೋಟ್ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೇ 1ರಂದು ನಡೆದಿದ್ದ ಈ ಘಟನೆಯನ್ನು ಮೊದಲು ಅಸಹಜ ಸಾವು (UDR) ಎಂದು ದಾಖಲಿಸಲಾಗಿತ್ತು. ಆದರೆ, ಮೃತದೇಹ ಪತ್ತೆಯಾದ ಕೋಣೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕದಿರುವುದು ಮತ್ತು ಚೆನ್ನಪ್ಪ ಪೂಜಾರಿಯವರ ಜೇಬಿನಲ್ಲಿ ‘ಡೆತ್ ನೋಟ್’ ಪತ್ತೆಯಾಗಿರುವುದು ಸಾವಿನ ಬಗ್ಗೆ ಸಂಶಯ ಮೂಡಿಸಿದೆ.
ಈ ಸಾಕ್ಷ್ಯಗಳ ಆಧಾರದ ಮೇಲೆ ಪಿರ್ಯಾದಿದಾರ ರವಿಚಂದ್ರ ಅವರು ನೀಡಿದ ಮರು ದೂರಿನಂತೆ, ಕಡಬ ಪೊಲೀಸರು ಇದೀಗ BNS ಕಲಂ 108ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.




