ಕರಾವಳಿ

ಪಾಪೆಮಜಲು ಸರಕಾರಿ ಪ್ರೌಢಶಾಲೆಗೆ 100% ಫಲಿತಾಂಶ: ಇಕ್ಬಾಲ್ ಹುಸೇನ್ ಅಭಿನಂದನೆ

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢಶಾಲೆಗೆ 2025-2026ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  100 ಶೇ ಫಲಿತಾಂಶ ಪಡೆದು ಸಾಧನೆ ಮಾಡಿದೆ. ಸತತ 3ನೇ ಬಾರಿ ಪಾಪೆಮಜಲು ಸರಕಾರಿ ಪ್ರೌಢಶಾಲೆಗೆ 100% ಫಲಿತಾಂಶ ಬಂದಿರುವುದಕ್ಕೆ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಸಂತಸ ವ್ಯಕ್ತಪಡಿಸಿದ್ದು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಪ್ರಯತ್ನ ಮತ್ತು ಮುಖ್ಯ ಶಿಕ್ಷಕರ, ಶಿಕ್ಷಕ ವೃಂದದವರ ಪರಿಶ್ರಮ ಮತ್ತು ಎಸ್.ಡಿ.ಎಂ.ಸಿ ಯ ಪ್ರೋತ್ಸಾಹದ ಫಲವಾಗಿ ನಮ್ಮ ಶಾಲೆ ಸತತವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡುತ್ತಿದೆ, ಇದು ನಮ್ಮ ಊರಿಗೆ ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದ್ದಾರೆ.


ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳ ಪೈಕಿ ಚಿರಾಗ್ ಸಿ.ಎಂ, ಶ್ರವಣ್ ಕುಮಾರ್, ಚರಿಷ್ಮಾ, ರಂಜಿತ್, ಪಂಚಮಿ ಮತ್ತು ಲಾವಣ್ಯ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಚರಿಷ್ಮಾ ಅತಿ ಹೆಚ್ಚು 589 (94 ಶೇ) ಅಂಕ ಪಡೆದ ವಿದ್ಯಾರ್ಥಿನಿ. 37 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆ ಎ, ಗ್ರೇಡ್ ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!