ಕಡಬದ ಸಹೋದರರ ಆವಿಷ್ಕಾರ:
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಮೊಬೈಲ್ ಆಪ್
ಕಡಬ ತಾಲೂಕಿನ ಮರ್ಧಾಳ ಗ್ರಾಮದ ಇಬ್ಬರು ಸಹೋದರರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ನೂತನ ಮೊಬೈಲ್ ಆಪ್ ರೂಪಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. V for IAS Notes ಎಂಬ ಆಪ್‌ನ್ನು ಮೋಹಮ್ಮದ್ ಮುಸ್ತಫಾ ಮರ್ಧಾಳ (ಸ್ಥಾಪಕರು) ಹಾಗೂ ಅಬ್ದುಲ್ ರಝಾಕ್ ಮರ್ಧಾಳ (ಸಹ ಸ್ಥಾಪಕರು) ಅಭಿವೃದ್ಧಿಪಡಿಸಿದ್ದಾರೆ.

UPSC, IAS, IPS ಸೇರಿದಂತೆ ವಿವಿಧ ಸರ್ಕಾರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡುವ ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಅಧ್ಯಯನ ಸಾಮಗ್ರಿಗಳನ್ನು ಒದಗಿಸುವ ಉದ್ದೇಶದಿಂದ ಈ ಆಪ್‌ನ್ನು ತಯಾರಿಸಲಾಗಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಅಧ್ಯಯನ ಸಾಮಗ್ರಿಗಳು ತಲುಪಬೇಕು ಎಂಬ ಉದ್ದೇಶದಿಂದ ಮರ್ಧಾಳದ ಮುಸ್ತಫಾ ಮರ್ಧಾಳ ಕಳೆದ 9 ವರ್ಷಗಳ ಸಂಶೋಧನೆ ಬಳಿಕ ಈ ಆಪ್ ರೂಪಿಸಿದ್ದಾರೆ. ಗ್ರಾಮೀಣ ಪ್ರತಿಭೆಗಳು ಹೊಸ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿರುವುದಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಆಪ್ ತಯಾರಿಸಿದ 3 ತಿಂಗಳಲ್ಲೇ 10,000 ಡೌನ್‌ಲೋಡ್ಸ್ ಹಾಗೂ 5000 ಆಕ್ಟೀವ್ ಬಳಕೆದಾರರನ್ನು ಹೊಂದಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳು Play Store ಹಾಗೂ Appstore ನಲ್ಲಿ V for IAS Notes ಎಂದು ಸರ್ಚ್ ಮಾಡಿ, ಡೌನ್‌ಲೋಡ್ ಮಾಡಿಕೊಳ್ಳಬಹುದು. ನಮ್ಮ ಈ ಸಾಧನೆಯ ಹಿಂದೆ ವೇಣುಗೋಪಾಲ್ ಪುಚ್ಚಪಾಡಿ ಎಂಬವರ ಸಹಕಾರ ಮತ್ತು ಪ್ರೋತ್ಸಾಹ ಇದೆ ಎಂದು ಆಪ್‌ನ ಸ್ಥಾಪಕರು ತಿಳಿಸಿದ್ದಾರೆ.
ಆಪ್‌ನ ವಿಶೇಷತೆಗಳು: ಮೈಂಡ್ ಮ್ಯಾಪ್‌ಗಳು ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ದೃಶ್ಯ ರೂಪದಲ್ಲಿ ನೀಡಲಾಗಿದೆ.
600+ ರಿಸರ್ಚ್ ಟೇಬಲ್‌ಗಳು ಯೋಜನೆಗಳು, ಅಂಕಿ ಅಂಶಗಳು, ದಿನಾಂಕಗಳು ಮತ್ತು ಹೋಲಿಕೆ ಮಾಹಿತಿಗಳು ಟೇಬಲ್ ರೂಪದಲ್ಲಿ ಲಭ್ಯವಿದೆ. ವಿಡಿಯೋ ವಿವರಣೆಗಳು ಕಷ್ಟವಾದ ವಿಷಯಗಳನ್ನು ಸರಳವಾಗಿ ತಿಳಿಸುವ ವಿಡಿಯೋ ಪಾಠಗಳು. ಕರೆಂಟ್ ಅಫೇರ್ಸ್ ಲಿಂಕ್ ಪ್ರತಿದಿನದ ಸುದ್ದಿಗಳನ್ನು ಮೂಲ ಪಠ್ಯ ವಿಷಯಗಳೊಂದಿಗೆ ಜೋಡಿಸಲಾಗಿದೆ. AI Read Aloud ಪಾಠಗಳನ್ನು ಕೇಳುತ್ತಾ ಕಲಿಯುವ ವ್ಯವಸ್ಥೆ. ರಸಪ್ರಶ್ನೆ ಮತ್ತು ರಾಷ್ಟ್ರೀಯ ರ‍್ಯಾಂಕ್ ಪ್ರಶ್ನೋತ್ತರಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಮಟ್ಟವನ್ನು ಪರೀಕ್ಷಿಸಬಹುದು.
UPSC,IAS,IPS ತಯಾರಿ ಮಾಡುವ ಪ್ರತಿಯೊಬ್ಬರೂ ಎದುರಿಸುವ ದೊಡ್ಡ ಛಾಲೆಂಜ್ ಎಂದರೆ ಎಲ್ಲ ವಿಷಯಗಳು ಒಂದೇ ಜಾಗದಲ್ಲಿ ಸಿಗುವುದಿಲ್ಲ. ಆ ದೃಷ್ಟಿಯಿಂದ ಎಲ್ಲ ವಿಷಯಗಳು ಒಂದೇ ಜಾಗದಲ್ಲಿ ಇಲ್ಲಿ ನಿಮಗೆ ಪಡೆಯಬಹುದು ಎಂದು ಆಪ್ ಸ್ಥಾಪಕ ಮೊಹಮ್ಮದ್ ಮುಸ್ತಫಾ ಮರ್ಧಾಳ ತಿಳಿಸಿದ್ದಾರೆ.
ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತಿದ್ದರೂ ವಿದ್ಯಾರ್ಥಿಗಳು ಸುಲಭವಾಗಿ ಓದಿ ತಯಾರಿ ನಡೆಸಲು ಈ ಆಪ್ ಸಹಾಯಕವಾಗಬೇಕು ಎಂಬುದು ನಮ್ಮ ಉದ್ದೇಶ ಎಂದು ಆಪ್‌ನ ಸಹಸ್ಥಾಪಕ ಅಬ್ದುಲ್ ರಝಾಕ್ ಮರ್ಧಾಳ ತಿಳಿಸಿದ್ದಾರೆ.



