ಕರಾವಳಿ

ಸಿ.ಎಸ್.ಡಬ್ಯು.ಸಿ. ಫಾಳಿಲಾ–ಫಳೀಲಾ ವುಮೆನ್ಸ್ ಕಾಲೇಜುಗಳ ಪಬ್ಲಿಕ್ ಪರೀಕ್ಷೆ ಇಂದಿನಿಂದ ಆರಂಭ

ಪುತ್ತೂರು: ‘ಸಮಸ್ತ’ ಅಧೀನದ ಸಿ.ಎಸ್.ಡಬ್ಯು.ಸಿ. ಸಂಸ್ಥೆಯ ಫಾಳಿಲಾ–ಫಳೀಲಾ ಮಹಿಳಾ ಕಾಲೇಜುಗಳ ವಾರ್ಷಿಕ ಪಬ್ಲಿಕ್ ಪರೀಕ್ಷೆಗಳು ಏಪ್ರಿಲ್ 20ರಿಂದ ಆರಂಭವಾಗಲಿವೆ. ಕರ್ನಾಟಕ, ಕೇರಳ ಸೇರಿದಂತೆ ಒಟ್ಟು 8 ಡಿವಿಷನ್‌ಗಳ ನೂರಕ್ಕೂ ಅಧಿಕ ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಗಳು ಏಪ್ರಿಲ್ 24ರವರೆಗೆ ನಡೆಯಲಿವೆ.


ಎಸ್.ಎಸ್.ಎಲ್.ಸಿ. ನಂತರದ ವಿದ್ಯಾರ್ಥಿನಿಯರಿಗೆ ಪಿಯುಸಿ ಜೊತೆಗೆ ಫಾಳಿಲಾ ಧಾರ್ಮಿಕ ಶಿಕ್ಷಣ ಮತ್ತು ಪಿಯುಸಿ ನಂತರದ ವಿದ್ಯಾರ್ಥಿನಿಯರಿಗೆ ಡಿಗ್ರಿಯೊಂದಿಗೆ ಫಳೀಲಾ ಉನ್ನತ ಧಾರ್ಮಿಕ ಶಿಕ್ಷಣವನ್ನು ಸಿ.ಎಸ್.ಡಬ್ಯು.ಸಿ. ಅಧೀನದ ನೂರಕ್ಕೂ ಹೆಚ್ಚು ಮಹಿಳಾ ಕಾಲೇಜುಗಳಲ್ಲಿ ನೀಡಲಾಗುತ್ತಿದೆ.

ಈ ಬಾರಿ ಫಾಳಿಲಾ ವಿಭಾಗದಲ್ಲಿ 1801 ಹಾಗೂ ಫಳೀಲಾ ವಿಭಾಗದಲ್ಲಿ 930 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 2731 ಮಂದಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಕರ್ನಾಟಕದಿಂದ ಫಾಳಿಲಾ ವಿಭಾಗದಲ್ಲಿ 233 ಮತ್ತು ಫಳೀಲಾ ವಿಭಾಗದಲ್ಲಿ 26 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 259 ಮಂದಿ ಪರೀಕ್ಷೆ ಬರೆಯಲಿದ್ದಾರೆ.


ಕರ್ನಾಟಕದಲ್ಲಿ ಎರಡು ಡಿವಿಷನ್‌ಗಳ ಅಡಿಯಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಕೇಂದ್ರೀಯ ಬೋರ್ಡ್ ನೇಮಕ ಮಾಡಿದ ಪರೀಕ್ಷಾ ಮೇಲ್ವಿಚಾರಕರು ಮತ್ತು ಅಧೀಕ್ಷರು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ನೇತೃತ್ವ ವಹಿಸಲಿದ್ದಾರೆ. ಝೋನ್ ಮಟ್ಟದ ಪರೀಕ್ಷಾ ನಿಯಂತ್ರಕರು ಸಹಕಾರ ನೀಡಲಿದ್ದಾರೆ.
ಕರ್ನಾಟಕದ ಪ್ರಮುಖ ಡಿವಿಷನ್ ಕೇಂದ್ರಗಳಾದ ಪುತ್ತೂರು ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜು ಹಾಗೂ ಮಿತ್ತಬೈಲು ದಾರುಲ್ ಉಲೂಂ ಶರೀಅತ್ ಕಾಲೇಜುಗಳಲ್ಲಿ ಪರೀಕ್ಷಾ ಮೇಲ್ವಿಚಾರಕರಿಗೆ ಮುಫತ್ತಿಷ್ ಉಮರ್ ದಾರಿಮಿ ಮತ್ತು ಮುಫತ್ತಿಷ್ ಫಾರೂಕ್ ದಾರಿಮಿ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಝೋನಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಹಾಗೂ ಝೋನಲ್ ಪರೀಕ್ಷಾ ಐಟಿ ಕನ್ವೀನರ್ ತಾಜುದ್ದೀನ್ ರಹ್ಮಾನಿ ಅವರ ನೇತೃತ್ವದಲ್ಲಿ ಪ್ರಶ್ನೆಪತ್ರಿಕೆಗಳನ್ನು ವಿತರಿಸಲಾಯಿತು.
 ಸಾಲ್ಮರ ಮೌಂಟನ್ ವ್ಯೂನಲ್ಲಿ ನಡೆದ ಪರೀಕ್ಷಾ ಮಾಹಿತಿ ಶಿಬಿರದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!