ಕರಾವಳಿ

ಸಾಲ್ಮರ ದಾರುಲ್ ಹಸನಿಯಾದಲ್ಲಿ ಭಾರತ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಕುಕ್ಕುವಳ್ಳಿಗೆ ಸನ್ಮಾನ

ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯ ಹಿಫ್ಲುಲ್ ಕುರ್‌ಆನ್ ವಿದ್ಯಾರ್ಥಿಗಳ 2026–27ನೇ ಸಾಲಿನ ಪ್ರವೇಶ ಪರೀಕ್ಷೆ ಹಾಗೂ ಸನ್ಮಾನ ಕಾರ್ಯಕ್ರಮವು ಪುತ್ತೂರು ಅಶ್ಮಿ ಕಂಫರ್ಟ್ ಹಾಲ್‌ನಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಾರುಲ್ ಹಸನಿಯಾ ಬುರೈದ ಸಮಿತಿಯ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರು, “ಕಳೆದ ಏಳು ವರ್ಷಗಳ ಹಿಂದೆ ಸ್ಥಾಪಿತವಾದ ದಾರುಲ್ ಹಸನಿಯಾ ವಿದ್ಯಾಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳೊಂದಿಗೆ ಗುರುತಿಸಿಕೊಂಡಿದೆ. ಇದೀಗ ಹಿಫ್ಲುಲ್ ಕುರ್‌ಆನ್ ಶಿಕ್ಷಣದ ಜೊತೆಗೆ ಎಸ್.ಎನ್.ಇ.ಸಿ. ಪಠ್ಯಕ್ರಮವನ್ನೂ ಅಳವಡಿಸಿಕೊಂಡು ಸಮನ್ವಯ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ” ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಅವರು ವಹಿಸಿದ್ದರು. ಸಯ್ಯಿದ್ ಯಹ್ಯಾ ತಂಙಳ್ ಸಾಲ್ಮರ ಅವರು ಪ್ರಾರ್ಥನೆಗೆ ನೇತೃತ್ವ ನೀಡಿದರು.
  ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಸಮಿತಿ ಸದಸ್ಯರಾದ ಹಾಜಿ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಅಬ್ದುಲ್ ಹಮೀದ್ ಬಾಖವಿ ಬೈರಿಕಟ್ಟೆ, ಅಬ್ದುಲ್ ಕರೀಂ ದಾರಿಮಿ ಕುಂಬ್ರ ಹಾಗೂ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಅಝಾದ್ ಮೊದಲಾದವರು ಮಾತನಾಡಿ ಶುಭವನ್ನು ಕೋರಿದರು.
  ಸಮಾರಂಭದಲ್ಲಿ ‘ಭಾರತ ಸೇವಾ ರತ್ನ ಪ್ರಶಸ್ತಿ’ ಪುರಸ್ಕೃತರಾದ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಪವಿತ್ರ ಹಜ್ಜ್ ಯಾತ್ರೆಗೆ ತೆರಳಲಿರುವ ಸಂಸ್ಥೆಯ ಆಡಳಿತ ಸಮಿತಿ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
   ಈ ಕಾರ್ಯಕ್ರಮದಲ್ಲಿ ಹುಸೈನ್ ಹಾಜಿ ಕೋಡಿಂಬಾಡಿ, ಉಮರ್ ಹಾಜಿ ಸಂಪ್ಯ, ರಿಯಾಝ್ ಇಂಜಿನಿಯರ್ ಪರ್ಲಡ್ಕ, ಅಶ್ರಫ್ ಹಾಜಿ ಗೋಳಿಕಟ್ಟೆ, ಅಬ್ದುಲ್ ರಶೀದ್ ಹಾಜಿ ನೈತಾಡಿ, ಅಬ್ದುಲ್ ಜಬ್ಬಾರ್ ಬಡಕೋಡಿ, ಶುಹೈರ್ ರಹ್ಮಾನಿ ಮಲಪ್ಪುರಂ, ಅಕ್ಬರ್ ಅಲಿ ಹುದವಿ ವಿಟ್ಲ, ಹಾಫಿಳ್ ಶಕೀಲ್ ಬಾಖವಿ ಈಶ್ವರ ಮಂಗಿಳ ಸ್ವಾಬಿರ್ ಫೈಝಿ ಕಲ್ಲೇಗ, ಶಹೀರ್ ಮುಸ್ಲಿಯಾರ್ ಪೋಲ್ಯ, ಅಬ್ದುಲ್ ಹಮೀದ್ ಫೈಝಿ ಖತಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
   ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಕಾರ್ಯಕ್ರಮವನ್ನು ನಿರ್ವಹಿಸಿ, ಕೊನೆಯಲ್ಲಿ ವಂದಿಸಿದರು.
    ಹಿಫ್ಲುಲ್ ಕುರ್ ಆನ್ ಪ್ರವೇಶ ಪರೀಕ್ಷೆಯಲ್ಲಿ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!