ಎ.14: ಕುಂಬ್ರದಲ್ಲಿ ಹಜ್ ತರಬೇತಿ ಶಿಬಿರ

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವತಿಯಿಂದ ಸುನ್ನಿ ಸಂಘ ಕುಟುಂಬಗಳ ಸಹಯೋಗದೊಂದಿಗೆ ಬೃಹತ್ ಹಜ್ ತರಬೇತಿ ಶಿಬಿರ ಎ.14ರಂದು ಕುಂಬ್ರ ಪರ್ಪುಂಜ ಅಬ್ರೋಡ್ ಹಾಲ್‌ನಲ್ಲಿ ಬೆಳಿಗ್ಗೆ 9-30ರಿಂದ ಮದ್ಯಾಹ್ನ 2 ಗಂಟೆ ವರೆಗೆ ನಡೆಯಲಿದೆ. ಖ್ಯಾತ ಧಾರ್ಮಿಕ ವಿಧ್ವಾಂಸ ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಅವರು ಹಜ್ ತರಬೇತಿ ಶಿಬಿರದ ನೇತೃತ್ವ ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.


