ಕರಾವಳಿ

ಬನ್ನೂರು: ದಖೀರತುಲ್ ಉಖ್ರಾ ಯಂಗ್‌ಮೆನ್ಸ್ ವತಿಯಿಂದ ಧಾರ್ಮಿಕ ಕಾರ್ಯಕ್ರಮ, ದಫ್ ಸ್ಪರ್ಧೆ

ಪುತ್ತೂರು: ಬೆಳ್ಳಿ ಹಬ್ಬದ ಪ್ರಯುಕ್ತ ದಖೀರತುಲ್ ಉಖ್ರಾ ಯಂಗ್‌ಮೆನ್ಸ್ ಎಸೋಸಿಯೇಶನ್ ವತಿಯಿಂದ ಮೇ.7ರಿಂದ 9ರವರೆಗೆ  ಧಾರ್ಮಿಕ ಕಾರ್ಯಕ್ರಮ ಹಾಗೂ ಹೊನಲು ಬೆಳಕಿನ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ ಇಲ್ಲಿನ ಬನ್ನೂರು ಬದ್ರಿಯಾ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.


ಮೇ. 7ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ ಸಯ್ಯದ್ ಮುತ್ತನ್ನೂರು ತಂಙಳ್ ನೇತೃತ್ವ ವಹಿಸಲಿದ್ದು, ಬನ್ನೂರು ಮಸೀದಿ ಮುದರ್ರಿಸ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಭಾಷಣಗೈಯಲಿದ್ದಾರೆ.
ಮೇ. 8ರಂದು ಮ‌ಸ್ಹೂದ್ ಸ‌ಅದಿ ಅವರ ತಂಡದಿಂದ ಬುರ್ದಾ ಆಲಾಪನೆ ನಡೆಯಲಿದ್ದು, ಅತಾವುಲ್ಲಾ ಹಿಮಮಿ ಸಖಾಫಿ ಕುಪ್ಪೆಟ್ಟಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.


ಮೇ. 9ರಂದು ಹೊನಲು ಬೆಳಕಿನ ಅಂತರ್‌ ರಾಜ್ಯ ಮಟ್ಟದ ಆಕರ್ಷಕ ದಫ್ ಸ್ಪರ್ಧೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!