ಕರಾವಳಿಕ್ರೈಂ

ಬೆಳ್ತಂಗಡಿ: ಕೋಳಿ ಅಂಕಕ್ಕೆ ದಾಳಿ, ನಾಲ್ವರು ವಶಕ್ಕೆ



ಬೆಳ್ತಂಗಡಿ: ಕೋಳಿ ಅಂಕಕ್ಕೆ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದು, ಸೊತ್ತು ವಶಪಡಿಸಿಕೊಂಡ ಘಟನೆ ಮಾ.27ರಂದು ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕಳೆಂಜ ಗ್ರಾಮದ ಮುರದಮೇಲು ಎಂಬಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ


ಪೊಲೀಸರು, ಪ್ರಶಾಂತ, ಶಶಿಕುಮಾ‌ರ್ ಹೊನ್ನಪ್ಪ ಗೌಡ, ಜನಾರ್ದನ ಎಂಬವರನ್ನು  ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ಜೂಜಾಟಕ್ಕೆ ಬಳಸಿದ 2,250 ರೂ. ನಗದು ಹಾಗೂ 14 ಅಂಕದ ಕೋಳಿಗಳು ಹಾಗೂ ಇತರೆ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!