ಕರಾವಳಿಕ್ರೈಂ

ಪೆಟ್ರೋಲ್ ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡ ಯುವಕ



ಉಡುಪಿ: ನಗರದ ಕಲ್ಸಂಕ ವೃತ್ತದ ಬಳಿ ಮೈಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡ ವ್ಯಕ್ತಿಯನ್ನು ಪೊಲೀಸರು ಹಾಗೂ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ ಘಟನೆ ರವಿವಾರ ಸಂಜೆ ವರದಿಯಾಗಿದೆ.


ಬಾಟಲಿಯಲ್ಲಿ ಪೆಟ್ರೊಲ್ ತುಂಬಿಸಿಕೊಂಡು ಬಂದಿದ್ದ ವ್ಯಕ್ತಿಯು, ಪೆಟ್ರೋಲ್ ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡನು. ಕೂಡಲೇ ಪೋಲಿಸರು ಹಾಗೂ ಸಮಾಜ ಸೇವಕರೋರ್ವರು ಆತನನ್ನು ರಕ್ಷಿಸಿದರು.

ಸಮಯಪ್ರಜ್ಞೆಯಿಂದ ಸಂಭವನೀಯ ದುರಂತ ತಪ್ಪಿಸಿದೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ವ್ಯಕ್ತಿ ಪಾನಮತ್ತನಾಗಿದ್ದನೋ ಅಥವಾ ಮನೋರೋಗಿಯೋ ಎಂಬುದು ಸ್ಪಷ್ಟವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!