ಕರಾವಳಿರಾಜ್ಯ

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ 5 ಕೋಟಿ ಅನುದಾನ: ಸಿಎಂಗೆ ಮನವಿ ಮಾಡಿದ ಅಶೋಕ್ ರೈ



ಪುತ್ತೂರು: ಶ್ರೀಕ್ಷೇತ್ರ ಗೆಜ್ಜೆಗಿರಿ ಇದರ ಅಭಿವೃದ್ದಿಗೆ 5 ಕೋಟಿ ರೂ ಅನುದಾನ ನೀಡುವಂತೆ ಶಾಸಕ ಅಶೋಕ್ ರೈ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.


ಗುರುವಾರ ಬೆಂಗಳೂರಿನಲ್ಲಿ ಸಿ ಎಂ ಅವರನ್ನು ಭೇಟಿಯಾದ ಶಾಸಕರು ಇತಿಹಾಸ ಪ್ರಸಿದ್ದ ಕೋಟಿ‌ಚೆನ್ನಯರ ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವನ್ನಾಗಿಸುವಲ್ಲಿ ಮತ್ತು ಈ ಕ್ಷೇತ್ರಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸುವ ವೇಳೆ ಅವರಿಗೆ ಮೂಲ‌ಸೌಕರ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಲ್ಲಿ ಅಭಿವೃದ್ದಿ ಕೆಲಸಗಳು ನಡೆಯಬೇಕಿದೆ. ಈ ಕಾರಣಕ್ಕೆ ಕ್ಷೇತ್ರಕ್ಕೆ ಅನುದಾನ ನೀಡಿವಂತೆ ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!