ಕರಾವಳಿರಾಜ್ಯ

ಸುಳ್ಯ : ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಮಡಿಕೇರಿಯಲ್ಲಿ ವಶ


ಸುಳ್ಯ: ಸಂಪಾಜೆಯಲ್ಲಿ ರಿಕ್ಷಾಕ್ಕೆ ಹಿಂದಿನಿಂದ ಗುದ್ದಿ ಪಲ್ಟಿಯಾದ ರಿಕ್ಷಾದ ಚಾಲಕ ಸುಂದರ ಅವರ ಸಾವಿಗೆ ಕಾರಣವಾದ ಕಾರನ್ನು ಮಡಿಕೇರಿ ಸಮೀಪದ ಕಾಟಕೇರಿಯಲ್ಲಿ ಮಡಿಕೇರಿ ಪೋಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಲ್ಲಿದ್ದವರು ಮೈಸೂರಿನವರೆಂದು ತಿಳಿದುಬಂದಿದ್ದು  ವಿಚಾರಣೆ ಮುಂದುವರಿದಿದೆ.


ರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು ಸಂಪಾಜೆ ಪೆಟ್ರೋಲ್‌ ಪಂಪ್‌ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರಗಳ ಕೆಳಗೆ ಸಿಲುಕಿ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!