ಮುಂಡೂರು ಶಾಲೆಯಲ್ಲಿ ಡಾ.ರಶ್ಮಾ ಎಂ ಶೆಟ್ಟಿಗೆ ಸನ್ಮಾನ
ಪುತ್ತೂರು: ಮಿಸೆಸ್ ಇಂಡಿಯಾ-2025 ಕಿರೀಟ ಮುಡಿಗೇರಿಸಿಕೊಂಡಿರುವ ಮುಂಡೂರಿನ ಡಾ.ರಶ್ಮಾ ಎಂ ಶೆಟ್ಟಿಯವರಿಗೆ ಮುಂಡೂರು ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯ ಗುರು ವಿಜಯ ಪಿ ಹಾಗೂ ಶಿಕ್ಷಕಿ ವನಿತಾ ಬಿ ಶುಭ ಹಾರೈಸಿದರು. ಶಾಲಾ ಹಿರಿಯ ವಿದ್ಯಾರ್ಥಿ ರಘುನಾಥ ಶೆಟ್ಟಿ ಪೊನೋನಿ, ಮೋಹಿತ್ ಶೆಟ್ಟಿ, ಸಮಿತಾ ಶೆಟ್ಟಿ, ಕುಮಾರಿ ನೇಸರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಜ್ಯೋತಿ ಮತ್ತು ಸದಸ್ಯರುಗಳು ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ರಾಮಚಂದ್ರ ಗೌಡ ಸ್ವಾಗತಿಸಿದರು. ಶಿಕ್ಷಕ ಅಬ್ದುಲ್ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.



