ಕರಾವಳಿಕ್ರೈಂ

ಸುಳ್ಯ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನದಿಯಲ್ಲಿ ಪತ್ತೆ



ಸುಳ್ಯ ನಾಪತ್ತೆಯಾಗಿದ್ದ ವೃದ್ದನ ಮೃತದೇಹ ಸುಳ್ಯದ ಓಡಬಾಯಿ ಬಳಿ ಪಯಸ್ವಿನಿ ನದಿಯಲ್ಲಿ ರವಿವಾರ ಪತ್ತೆಯಾಗಿದೆ. ಅಜ್ಜಾವರ ಗ್ರಾಮದ ದೊಡ್ಡರಿ ನಿವಾಸಿ ಕೃಷ್ಣಪ್ಪ ನಾಯ್ಕ (70) ಮೃತಪಟ್ಟವರು.


ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದ ಕೃಷ್ಣಪ್ಪ ಅವರಿಗಾಗಿ ಮನೆಯವರು ಹುಡುಕಾಟ ನಡೆಸಿದ್ದರು. ನದಿ ದಾಟುವ ವೇಳೆ ಅಥವಾ ಇನ್ನಾವುದೋ ಕಾರಣಕ್ಕೆ ನದಿಗೆ ಇಳಿದ ವೇಳೆ ಆಕಸ್ಮಿಕವಾಗಿ ನದಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಸುಳ್ಯ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!