ಬೆಳ್ತಂಗಡಿ: ಬೈಕ್ ಕಳ್ಳತನ ಆರೋಪ, ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ
ಬೆಳ್ತಂಗಡಿ: ಬೈಕ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ಇಬ್ಬರನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರೋಡಿ ಎಂಬಲ್ಲಿ ನಡೆದಿದೆ.

ಮಂಗಳೂರಿನ ಬೆಂಗ್ರೆ ಕಸಬಾ ನಿವಾಸಿಗಳಾದ ಮೊಯಿದೀನ್ ನಾಸಿರ್ ಹಾಗೂ ಅಬ್ದುಲ್ ಸಮದ್ ಹಲ್ಲೆಗೊಳಗಾದವರು.
ಈ ಸಂಬಂಧ ಹಲ್ಲೆಗೊಳಗಾದವರು ನೀಡಿರುವ ದೂರಿನಂತೆ ಸ್ಥಳೀಯರಾದ ಎಂಟು ಮಂದಿ ಹಾಗೂ ಇತರರ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಹಲ್ಲೆಗೊಳಗಾದವರ ಮೇಲೆ ಬೈಕ್ ಕಳವಿಗೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20ರಂದು ಬೆಳಗ್ಗಿನ ಜಾವ 2:30ರ ಸುಮಾರಿಗೆ ಈ ಘಟನೆ ನಡೆದಿದೆ. ಬೈಕ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೊಯಿದೀನ್ ನಾಸಿರ್ ಹಾಗೂ ಅಬ್ದುಲ್ ಸಮದ್ ರನ್ನು ಸುಮಾರು 25-30 ಜನರಿದ್ದ ಗುಂಪೊಂದು ಹಿಡಿದು ಮರಕ್ಕೆ ಕಟ್ಟಿ ಥಳಿಸಿದೆ.





