ಕರಾವಳಿ

ವೈಟ್ ಸ್ಟೋನ್ ಯುನೈಟೆಡ್ ಕ್ರಿಕೆಟ್ ಲೀಗ್ ‘ಪುತ್ತೂರು ಪರ್ಲ್ಸ್’ ತಂಡ ಸಜ್ಜು








ಪುತ್ತೂರು: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್ ಆಶ್ರಯದಲ್ಲಿ ಜ.26ರಿಂದ ಫೆ.1ರ ವರೆಗೆ ಮಂಗಳೂರು ಉಳ್ಳಾಲದಲ್ಲಿ ವೈಟ್ ಸ್ಟೋನ್ ಯುನೈಟೆಡ್ ಕ್ರಿಕೆಟ್ ಲೀಗ್ ನಡೆಯಲಿದ್ದು ಪ್ರತಿಷ್ಠಿತ 12 ತಂಡಗಳು ಭಾಗವಹಿಸಲಿದೆ.

ಪಂದ್ಯಾಕೂಟದಲ್ಲಿ ಅನಿವಾಸಿ ಉದ್ಯಮಿ ಅಮ್ಜದ್ ಖಾನ್ ಪೋಳ್ಯ ಅವರ ಮಾಲಕತ್ವದ ‘ಪುತ್ತೂರು ಪರ್ಲ್ಸ್’ ತಂಡ ಕೂಡಾ ಕಣಕ್ಕಿಳಿಯಲಿದೆ. ಮುಹಮ್ಮದ್ ನಸೀರ್ ಹಾಗೂ ಮುಹಮ್ಮದ್ ರೆಹಾನ್ ತಂಡದ ಸಹ ಮಾಲಕರಾಗಿದ್ದು ತಂಡದ ಕೋಚ್ ಆಗಿ ಮುಹಮ್ಮದ್ ನಿಹಾನ್ ಕಾರ್ಯ ನಿರ್ವಹಿಸಲಿದ್ದಾರೆ. ಖ್ಯಾತ ಆಟಗಾರ ಮೆಹಬೂಬ್ ಕ್ಯಾಲಿಕಟ್ ಐಕಾನ್ ಆಟಗಾರನಾಗಿದ್ದು ನಿಝಾರ್ ಅರೆಕ್ಕಲ್, ಸಿನಾನ್ ಆರ್ಸೆವೆನ್, ನವಾಝ್, ಮುಹಮ್ಮದ್ ಆರಿಫ್‌ರಂತ ಬಲಿಷ್ಠ ಆಟಗಾರರು ತಂಡದಲ್ಲಿದ್ದಾರೆ.
ತಂಡದ ಮಾಲಕರಾದ ಅಮ್ಜದ್ ಖಾನ್ ಪೋಳ್ಯ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕ್ರಿಕೆಟ್ ಆಟಗಾರನಾಗಿದ್ದು, ಪುತ್ತೂರು ಇಲೆವೆನ್ ತಂಡದ ಮಾಜಿ ಆರಂಭಿಕ ದಾಂಡಿಗನಾಗಿದ್ದರು. ಪ್ರಸ್ತುತ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಂದ್ಯಾಕೂಟದ ಬಗ್ಗೆ ಮಾತನಾಡಿದ ಅಮ್ಜದ್ ಖಾನ್ ಅವರು ಪ್ರತಿಷ್ಠಿತ ವೈಟ್ ಸ್ಟೋನ್ ಯುನೈಟೆಡ್ ಕ್ರಿಕೆಟ್ ಲೀಗ್‌ನಲ್ಲಿ ಪುತ್ತೂರು ಪರ್ಲ್ಸ್ ತಂಡ ಭಾಗವಹಿಸುತ್ತಿದೆ. ನಮ್ಮ ತಂಡ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದ್ದು ಪಂದ್ಯಾವಳಿಯಲ್ಲಿ ಗಮನಾರ್ಹ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!