ಕರಾವಳಿಕ್ರೈಂ

ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ವಲಸೆ ಕಾರ್ಮಿಕನಿಗೆ ಹಲ್ಲೆ ನಡೆಸಿದ ಮೂವರ ಬಂಧನ

ಮಂಗಳೂರು: ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಬಾಂಗ್ಲಾದೇಶದ ಪ್ರಜೆ ಎಂದು ಆರೋಪಿಸಿ ಹಲ್ಲೆ ನಡೆಸಿರುವ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.



ರತೀಶ್ ದಾಸ್ ಯಾನೆ ಲಾಲು (32), ಧನುಷ್ (24) ಮತ್ತು ಸಾಗರ್ (24) ಬಂಧಿತ ಆರೋಪಿಗಳು.
ಜ. 11ರಂದು ಸಂಜೆ ನಾಲ್ವರು ಆರೋಪಿಗಳು ಜಾರ್ಖಂಡ್ ಮೂಲದ ಕಾರ್ಮಿಕನನ್ನು ತಡೆದು ನಿಲ್ಲಿಸಿ, ನೀನು ಹಿಂದೂನಾ? ಮುಸ್ಲಿಮ್? ಎಂದು ಪ್ರಶ್ನಿಸಿ ಜನಾಂಗೀಯ ನಿಂದನೆ ಮಾಡಿದ್ದಲ್ಲದೆ, “ನೀನು ಬಾಂಗ್ಲಾದೇಶದವನು” ಎಂದು ಆಪಾದಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾರಣೆ ಮಾಡುವ ತಾಪಿಯಿಂದ ತನ್ನ ಮೇಲೆ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಸಂಖ್ಯೆ 03/2026 ಕಲಂ 126(2), 352, 351(3), 353, 109, 118(1) ಹಾಗೂ 3(5) ಭಾರತೀಯ ನ್ಯಾಯ ಸಂಹಿತೆ–2023 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!