ಬೆಳ್ತಂಗಡಿ: ಲಕ್ಷಾಂತರ ರೂ ಮೌಲ್ಯದ ಮಾದಕ ವಸ್ತು ಸಹಿತ ಆರೋಪಿಯ ಬಂಧನ
ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಆನಂದ ಎಂ ರವರು ಸಿಬ್ಬಂದಿಗಳೊಂದಿಗೆ ದಿನಾಂಕ ಜ.03ರಂದು ಸಂಜೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆಯ ಎಂ.ಎ ಕಾಂಪ್ಲೆಕ್ಸ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಅನುಮಾನಸ್ಪದವಾಗಿ ಕುಳಿತಿದ್ದ ಆರೋಪಿತ ಉಮ್ಮರ್ ಶರೀಪ್(42 ವ) ದೇರಳಕಟ್ಟೆ ಮಂಗಳೂರು ಕೋಟೆಕಾರ್ ಎಂಬಾತನನ್ನು ವಿಚಾರಿಸಲಾಗಿ, ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ತಂದಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಪಂಚರ ಸಮಕ್ಷಮ ಅಂಗಶೋಧನೆ ನಡೆಸಿದಾಗ, 4 ಸಿಗರೇಟ್ ಪ್ಯಾಕೆಟ್‌ಗಳೊಳಗೆ 8 ಪ್ಲಾಸ್ಟಿಕ್ ಕವರ್‌ಗಳಲ್ಲಿ ಎಂಡಿಎಂಎ ಪತ್ತೆಯಾಗಿದ್ದು, ತೂಕ 55.48 ಗ್ರಾಂ ಆಗಿರುತ್ತದೆ. ಇದರ ಅಂದಾಜು ಮೌಲ್ಯ ರೂ.5,54,800/- ಆಗಿರುತ್ತದೆ. ವಿಚಾರಣೆಯಲ್ಲಿ ಸದ್ರಿ ಮಾದಕ ವಸ್ತುವನ್ನು ಸುನ್ನತ್ ಕೆರೆ ನಿವಾಸಿ ನೌಷಾದ್ ಎಂಬಾತ ನೀಡಿರುವುದಾಗಿ ತಿಳಿಸಿರುತ್ತಾನೆ.
ನಿಷೇಧಿತ ಮಾದಕ ವಸ್ತು ಸಾಗಾಟ ಹಾಗೂ ಮಾರಾಟಕ್ಕೆ ಬಳಸಿದ ಕೆಎ-19 ಎಂಜಿ-4669 ಕಾರಿನ ಅಂದಾಜು ಮೌಲ್ಯ ರೂ.6,00,000/- ಆಗಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 01/2026 ಕಲಂ: 8(c) 22( c) NDPS Act ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





