ಕೈ ಬರಹದಲ್ಲಿ ಕುರಾನ್ ಬರೆದ
ಸಜ್ಲಾ ಬೈತಡ್ಕಗೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಗೌರವ
ಪುತ್ತೂರು: ಕಲಂನಲ್ಲಿ ಮಷಿ ಅದ್ದಿ, ಕೈ ಬರಹ ಮೂಲಕ ಪವಿತ್ರ ಕುರಾನ್ ಬರೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಕುಂಬ್ರ ಮರ್ಕಝುಲ್ ಹುದಾ ಪದವಿ ವಿಭಾಗದ ಹಳೆ ವಿದ್ಯಾರ್ಥಿನಿ ಸಜ್ಲಾ ಬೈತಡ್ಕ ಅವರು ಇದೀಗ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿ ವಿಶ್ವ ಮಟ್ಟದ ಕೀರ್ತಿಯನ್ನು ಗಳಿಸಿದ್ದಾರೆ.
ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಪದಕ ಮತ್ತು ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ.
ಎರಡು ದಾಖಲೆಯೊಂದಿಗೆ ಈ ಗೌರವ ಪಡೆದ ವಿಶ್ವದ ಪ್ರಥಮ ವಿದ್ಯಾರ್ಥಿನಿ ಎನ್ನಲಾಗಿದೆ.

ಕೈ ಬರಹದಲ್ಲಿ ಮಷಿ ಅದ್ದಿ ಕುರಾನ್ ಬರೆದ ಸಾಧನೆಯೊಂದಿಗೆ ಅತ್ಯಂತ ದೊಡ್ಡ ಕೈ ಬರಹ ಕುರಾನ್ ಎಂಬ ದಾಖಲೆಯನ್ನೂ ಪಡೆದು ಈ ವಿಭಾಗದಲ್ಲಿ ಎರಡೂ ದಾಖಲೆಗಳನ್ನು ಮಾಡಿದ ಏಕೈಕ ವಿದ್ಯಾರ್ಥಿನಿಯಾಗಿ ಸಜ್ಲಾ ಹೊರಹೊಮ್ಮಿದ್ದಾರೆ.
ಇವರು ಬೈತಡ್ಕ ನಿವಾಸಿ ಇಸ್ಮಾಯಿಲ್ ಹಾಜಿ ಮತ್ತು
ಝಹ್ರಾ ಜಾಸ್ಮಿನ್ ದಂಪತಿಯ ಪುತ್ರಿ.




