ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆಗೆ ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ
ಅಭಿನಂದನಾ ಸಮಾರಂಭ
ಪುತ್ತೂರು: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಝಕರಿಯಾ ಹಾಜಿ ಜೋಕಟ್ಟೆ ಅವರಿಗೆ ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಅಭಿನಂದನಾ ಸಮಾರಂಭ ನಡೆಯಿತು.

ಸಂಸ್ಥೆಯ ಉಪಾಧ್ಯಕ್ಷ ರಫೀಕ್ ಹಾಜಿ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ಝಕರಿಯಾ ಜೋಕಟ್ಟೆ ಅವರನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಝಕರಿಯಾ ಜೋಕಟ್ಟೆ ಮಾತನಾಡಿ ಸುಶಿಕ್ಷಿತ ಸಮಾಜ ಕಟ್ಟುವುದು ನಮ್ಮ ಕರ್ತವ್ಯವಾಗಿದ್ದು, ಬಡತನ ಕಲಿಕೆಗೆ ಅಡ್ಡಿಯಾಗಬಾರದು ಅವರ ಕಲಿಕೆಗೆ ಸಮಾಜದ ಶ್ರೀಮಂತರು ನೆರವಾಗಬೇಕು, ದಾರುಲ್ ಹಸನಿಯಾ ಸಂಸ್ಥೆಗೆ ತನ್ನ ಸಹಕಾರ ಇದೆ ಎಂದು ಹೇಳಿದರು.
ರಫೀಕ್ ಮಾಸ್ಟರ್ ಮಾತನಾಡಿದರು. ಸಮಾರಂಭದಲ್ಲಿ ಸಯ್ಯಿದ್ ಯಹ್ಯ ತಂಙಳ್, ಫಾರೂಕ್ ಹಾಜಿ ಪೋರ್ಟ್‌ವೆ, ರಫೀಕ್ ಹಾಜಿ ಸೂರಿಂಜೆ ಜುಬೈಲ್, ಅಬ್ದುಲ್ ಹಮೀದ್ ಹಾಜಿ ಅರೆಮೆಕ್ಸ್ ಉಳ್ಳಾಲ ಜುಬೈಲ್, ಕಮರುದ್ದೀನ್ ಹಾಜಿ ಗೂಡಿನಬಳಿ, ಅನ್ವರ್ ಸಾದಾತ್ ಪಾಣೆಮಂಗಳೂರು, ಅಬ್ದುಲ್ ರಹಿಮಾನ್ ಹಾಜಿ ಪಾಣಾಜೆ, ಝಕರಿಯಾ ಬುರೈದ, ಬಾತಿಷಾ ಅಬುದಾಬಿ, ಫೈರೋಝ್ ಹಾಜಿ ಜುಬೈಲ್, ಆಸಿಫ್ ಹಾಜಿ ದರ್ಬೆ ಜುಬೈಲ್, ತಹ್ಸೀರ್ ಜುಬೈಲ್, ಶಾಕಿರ್ ಹುದವಿ ಮಾಡನ್ನೂರು, ಹಸನ್ ಹಾಜಿ ಸಿಟಿ ಬಝಾರ್, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಅಬ್ದುಲ್ ಕರೀಂ ದಾರಿಮಿ ಕುಂಬ್ರ, ಅಶ್ರಫ್ ದಾರಿಮಿ ಮೊಟ್ಟೆತ್ತಡ್ಕ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಅಶ್ರಫ್ ಹಾಜಿ ಪರ್ಲಡ್ಕ, ಇಸ್ಮಾಯಿಲ್ ಸಾಲ್ಮರ, ಶಾಕಿರ್ ಯಾಮಾನಿ, ಜಮಾಲುದ್ದೀನ್ ಹಾಜಿ ಮುಕ್ವೆ, ಸಲೀಂ ಕೂರ್ನಡ್ಕ ದಮಾಮ್, ಬಾವಾ ಹಾಜಿ ಕೂರ್ನಡ್ಕ, ಅಬ್ದುಲ್ ಹಮೀದ್ ಬಾಖವಿ, ಅಬ್ದುಲ್ ಲತೀಫ್ ಫೈಝಿ ಕುಪ್ಪೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಸ್ವಾಗತಿಸಿದರು. ಕೆ.ಎಂ.ಎ..ಕೊಡುಂಗಾಯಿ ವಿವಿಧ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.



