ಕಬಕ: ರಸ್ತೆ ಸಂಪರ್ಕ ಇಲ್ಲದ ಮನೆಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಿದ ಶಾಸಕ ಅಶೋಕ್ ರೈ

ಪುತ್ತೂರು: ಕಬಕ ಗ್ರಾಮದ ವಿದ್ಯಾಪುರ 9ನೇ ಅಡ್ಡ ರಸ್ತೆಯಲ್ಲಿ 6 ಮನೆಗಳಿದ್ದು ಇಲ್ಲಿನ ನಿವಾಸಿಗಳಿಗೆ ರಸ್ತೆ ಸಂಪರ್ಕ ಇರಲಿಲ್ಲ. ಕಳೆದ ಹಲವಾರು ವರ್ಷಗಳಿಂದ ರಸ್ತೆಗಾಗಿ ಹೋರಾಟ ಮಾಡುತ್ತಿದ್ದರು. ಶಾಸಕ ಅಶೋಕ್ ರೈ ಮಧ್ಯಸ್ತಿಕೆಯಲ್ಲಿ ಸೌಹಾರ್ಧ ಮಾತುಕತೆ ನಡೆದು ಮನೆಗಳಿಗೆ ರಸ್ತೆ ಸಂಪರ್ಕದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪರಿಸರದ ಮನೆಯವರು ಶಾಸಕ ಅಶೋಕ್ ರೈ ಅವರನ್ನು ಅಭಿನಂದಿಸಿದರು.




