ಕ್ರೈಂರಾಜ್ಯ

ಹೊಸ ವರ್ಷದ ಮೆಸೇಜ್ ತೆರೆಯುವ  ಮುನ್ನ ಹುಷಾರ್…ಎಚ್ಚರ!


ಬೆಂಗಳೂರು: ಹೊಸ ವರ್ಷ ಸಂದರ್ಭವನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ನಕಲಿ ಜಾಲವನ್ನು ಹರಡುತ್ತಿದ್ದಾರೆ. ಆಫರ್‌ಗಳು, ಗಿಫ್ಟ್‌ಗಳು, ಕ್ಯಾಶ್‌ಬ್ಯಾಕ್ ಎನ್ನುವ ಆಕರ್ಷಕ ಸಂದೇಶಗಳನ್ನು ವಾಟ್ಸ್‌ಆಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಕಳುಹಿಸಲಾಗುತ್ತಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿದ್ದೇ ಆದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ವಂಚಕರ ಪಾಲಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಜನರು ಮೋಸದ ಜಾಲಕ್ಕೆ ಬಲಿಯಾಗದಂತೆ  ಎಚ್ಚರ ವಹಿಸಬೇಕಾಗಿದೆ.

ಅಪರಿಚಿತ ನಂಬರ್ ಗಳಿಂದ ಬರುವ ಲಿಂಕ್‌ಗಳು,  ಆಫರ್ ಸಂದೇಶಗಳನ್ನು ತೆರೆಯದೆ ಬಿಟ್ಟು ಬಿಡಬೇಕು. ಅಲ್ಪ ಎಚ್ಚರ ತಪ್ಪಿದರೂ ಮೋಸ ಹೋಗುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *

error: Content is protected !!