ಕ್ರೀಡೆರಾಷ್ಟ್ರೀಯ

ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟ: ಶುಭಮನ್ ಗಿಲ್’ಗೆ ಇಲ್ಲ ಅವಕಾಶ

ಮುಂಬೈ: ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿರುವ ಟಿ-20 ವಿಶ್ವಕಪ್ ಗಾಗಿ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ. ಫಾರ್ಮ್ ನಲ್ಲಿ ಇಲ್ಲದ ಶುಭಮನ್ ಗಿಲ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅಕ್ಷರ್ ಪಟೇಲ್ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.


ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿನ ಅತ್ಯುತ್ತಮ ಪ್ರದರ್ಶನದಿಂದ ಇಶಾನ್ ಕಿಶಾನ್ ತಂಡಕ್ಕೆ ಎಂಟ್ರಿ ಆಗಿದ್ದಾರೆ.  ಜನವರಿ 21 ರಿಂದ 31 ರವರೆಗೆ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಇದೇ ತಂಡ ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ. ಇಲ್ಲಿನ ಪ್ರಧಾನ ಕಚೇರಿಯಲ್ಲಿ ಬಿಸಿಸಿಐ ಹಿರಿಯ ಆಯ್ಕೆದಾರರ ಸಮಿತಿ ಸಭೆ ನಂತರ ತಂಡವನ್ನು ಅಂತಿಮಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!