ಚಿರತೆ ದಾಳಿಗೆ ಕರು ಬಲಿ
ಬೆಳ್ತಂಗಡಿ: ಚಿರತೆಯೊಂದು ದಾಳಿ ನಡೆಸಿ ಕರುವನ್ನು ಕೊಂದು ಹಾಕಿದ ಘಟನೆ ಪಡಂಗಡಿಯ ದೇಜಪ್ಪ ಎಂಬವರ ಮನೆಯಲ್ಲಿ ನಡೆದಿದೆ. ಚಿರತೆಯು ಕರುವಿನ ಹೊಟ್ಟೆಯ ಭಾಗವನ್ನು ಸಂಪೂರ್ಣವಾಗಿ ತಿಂದು ಹಾಕಿದೆ.
ಅರಣ್ಯ ಇಲಾಖೆ ಮತ್ತು ಪಶು ವೈದ್ಯಾಧಿಕಾರಿ ಭೇಟಿ ನೀಡಿ, ಕರುವಿನ ಪೋಸ್ಟ್ ಮಾರ್ಟಂ ನಡೆಸಿದ್ದಾರೆ. ಚಿರತೆ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದ್ದು, ಚಿರತೆಯನ್ನು ಶೀಘ್ರವಾಗಿ ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.



