ಮಸೀದಿಯ ಮುಅಲ್ಲಿಂಗೆ ಹೋಂಡಾ ಆಕ್ಟಿವಾ ಉಡುಗೊರೆ ನೀಡಿದ ಜಮಾಅತ್ ಸದಸ್ಯ
ಪುತ್ತೂರು: ಮಸೀದಿಯೊಂದರ ಮುಅಲ್ಲಿಂಗೆ ಜಮಾಅತ್ ಸದಸ್ಯರೋರ್ವರು ದ್ವಿಚಕ್ರ ವಾಹನವೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸುಮಾರು 25 ವರ್ಷಗಳಿಂದ ಮುಅಲ್ಲಿಂ ಆಗಿ ಸೇವೆ ಸಲ್ಲಿಸುತ್ತಿರುವ ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ರೆಂಜಲಾಡಿ ಆದರ್ಶ ಸೇವಾ ಸಂಘದ ಅಧ್ಯಕ್ಷ, ಮಲ್ನಾಡ್ ಲೈಮ್ ಇಂಡಸ್ಟ್ರೀಸ್‌ನ ಮಾಲಕರಾದ ಇಮ್ರಾನ್ ಮಲ್ನಾಡ್ ಅವರು ಸುಮಾರು 1 ಲಕ್ಷದ 15 ಸಾವಿರ ರೂ ವೆಚ್ಚದ ಹೋಂಡಾ ಆಕ್ಟಿವಾವನ್ನು ಉಡುಗೊರೆ ರೂಪದಲ್ಲಿ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ರೆಂಜಲಾಡಿ ಮಸೀದಿಯ ಖತೀಬ್ ನಾಸಿರ್ ಫೈಝಿ ಉಪಸ್ಥಿತರಿದ್ದರು.



