ಕರಾವಳಿಕ್ರೈಂ

ಪುತ್ತೂರು: ನಾಪತ್ತೆಯಾಗಿದ್ದ ಯುವಕನ ಮೃತದೇಹ ಗುಡ್ಡದಲ್ಲಿ ಪತ್ತೆ

ಪುತ್ತೂರು: ನಾಪತ್ತೆಯಾಗಿದ್ದ ಯುವಕನ ಮೃತದೇಹವು ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆ.




ಬದ್ರುದ್ದೀನ್ ಡಿಕೆ (27)  ಸುಮಾರು 8 ವರ್ಷಗಳಿಂದ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ.
ನ.29ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದು, ಬಳಿಕ ಮಾಲಕರಿಗೆ ತಿಳಿಸಿ ಅಂಗಡಿಯಿಂದ ತೆರಳಿದವರು ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೆ ಕಾಣೆಯಾಗಿರುವುದಾಗಿ ದೂರು ನೀಡಲಾಗಿತ್ತು.



ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೀಗ ಯುವಕನ ಮೃತದೇಹ ಸೇಡಿಯಾಪು ಸಮೀಪದ ಹನುಮಾಜೆಯ ಗುಡ್ಡದಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!