ಸ್ಕೂಟರ್ಗೆ ಕಾರು ಢಿಕ್ಕಿ: ಕಾಲೇಜು ವಿದ್ಯಾರ್ಥಿನಿ ಮೃತ್ಯು
ಬಂಟ್ವಾಳ: ವಿದ್ಯಾರ್ಥಿನಿಯರು ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದು ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮತ್ತೋರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಕಾವಳಕಟ್ಟೆ ಸಮೀಪದ ಎನ್. ಸಿ.ರೋಡ್ ಬಳಿ ನ.19ರಂದು ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕಡಬ ನಿವಾಸಿ ಸುನೀಲ್ ಎಂಬವರ ಪುತ್ರಿ ಅನನ್ಯಾ (21) ಎಂದು ಗುರುತಿಸಲಾಗಿದೆ. ಗಾಯಗೊಂಡ ಸಹ ಸವಾರೆಯನ್ನು ಗುರುವಾಯನಕೆರೆ ನಿವಾಸಿ ಪೃಥ್ವಿ ರಾವ್ ಎಂದು ಗುರುತಿಸಲಾಗಿದೆ.
ಗಾಯಾಳು ವಿದ್ಯಾರ್ಥಿನಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರೂ ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೂಂಜಾಲಕಟ್ಟೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.





