ಐಡಿಯಲ್ ಅಸೋಸಿಯೇಷನ್ ಫಾರ್ ಮೈನಾರಿಟಿ ಎಜುಕೇಶನ್ (IAME) ಮಂಗಳೂರು ಪ್ರಾದೇಶಿಕ ಸಮಿತಿ ರಚನೆ
ಮಂಗಳೂರು: ನಗರದ ಎ.ಜೆ. ಗ್ರಾಂಡ್ ಹೋಟೆಲ್‌ನಲ್ಲಿ ನಡೆದ ಐಡಿಯಲ್ ಅಸೋಸಿಯೇಷನ್ ಫಾರ್ ಮೈನಾರಿಟಿ ಎಜುಕೇಶನ್ (IAME) ಕಾರ್ಯಕಾರಿ ಸಭೆಯಲ್ಲಿ ಮಂಗಳೂರು ಪ್ರಾದೇಶಿಕ ಸಮಿತಿಯನ್ನು ರಚಿಸಲಾಯಿತು.

ಸಂಸ್ಥೆಯ ಸಲಹಾ ಸಮಿತಿ ಸಮಿತಿಯ ಪದಾಧಿಕಾರಿಗಳಾಗಿ
ಬಿ.ಜಿ. ಹನೀಫ್ ಹಾಜಿ (ಅಧ್ಯಕ್ಷರು, ಸೈಯದ್ ಮದನಿ ದರ್ಗಾ), ಮುಸ್ತಫಾ ಸಅದಿ ಮೂಳೂರು, ಅಬ್ದುಲ್ ಖಾದರ್ ಸಖಾಫಿ ಉಸ್ತಾದ್ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಸಿನಾನ್ ಸಖಾಫಿ( ಓಶಿಯನ್ ಗ್ಲೋಬಲ್ ಸ್ಕೂಲ್ ಮಂಗಳೂರು), ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ. ರಂಝಿ ಮುಹಮ್ಮದ್ (ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು),ಹಣಕಾಸು ಕಾರ್ಯದರ್ಶಿಯಾಗಿ ಅಬು ಸಲೇಹ್ ಅಝ್ಹರಿ (ಅಲ್ ಮದೀನಾ ಸ್ಕೂಲ್), ಉಪಾಧ್ಯಕ್ಷರಾಗಿ
ಕೆ.ಎಸ್. ಹಬೀಬುರ್ರಹ್ಮಾನ್ (ಅಲ್ ಇಹ್ಸಾನ್ ಅಕಾಡೆಮಿ ಮೂಳೂರು), ರಸೂಲ್ ಖಾನ್ (ಹಝ್ರತ್ ಸೈಯದ್ ಮದನಿ ಆಂಗ್ಲ ಶಾಲೆ ಉಳ್ಳಾಲ), ಕಾರ್ಯದರ್ಶಿಗಳಾಗಿ
ಮುಹಮ್ಮದ್ ಮನಾಝಿರ್ (ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲ), ಮುಹಮ್ಮದ್ ಶಫೀಕ್ (ದಾರುಲ್ ಅಶ್ ರಿಯಾ ಇಂಗ್ಲಿಷ್ ಮೀಡಿಯಾ ಸ್ಕೂಲ್ ಸುರಿಬೈಲ್), ಬದ್ರುದ್ದಿನ್ ಬಿ ಎ (ಬುಶ್ರಾ ಇಂಗ್ಲಿಷ್ ಮೀಡಿಯಮ್ ಶಾಲೆ) ಆಯ್ಕೆಯಾದರು.




