ಅಂತಾರಾಷ್ಟ್ರೀಯರಾಷ್ಟ್ರೀಯ

ಮದೀನಾ ಸಮೀಪ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ 18 ಮಂದಿಯ ದುರಂತ ಅಂತ್ಯ



ಸೌದಿ ಅರೇಬಿಯಾದ ಮದೀನಾ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 45 ಮಂದಿಯ ಪೈಕಿ 18 ಮಂದಿ ಹೈದರಾಬಾದ್‌ನ ಒಂದೇ ಕುಟುಂಬಕ್ಕೆ ಸೇರಿದವರು ಹಾಗೂ ಇದರಲ್ಲಿ ಒಂಭತ್ತು ಮಂದಿ ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಅವರು ಮುಂದಿನ ಶನಿವಾರ ಭಾರತಕ್ಕೆ ಮರಳುವವರಿದ್ದರು.


ಉಮ್ರಾ ಆಗಿ ಅವರು ಮದೀನಾಕ್ಕೆ ವಾಪಸಾಗುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 1:30ರ ಹೊತ್ತಿಗೆ ಅಪಘಾತ ಸಂಭವಿಸಿದೆ.9 ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಹದಿನೆಂಟು ಸದಸ್ಯರು ಮೃತಪಟ್ಟಿದ್ದಾರೆ. ಮೃತರ ಕುಟುಂಬ, ಊರು, ನೀರವ ಮೌನಕ್ಕೆ ಶರಣಾಗಿದೆ.

Leave a Reply

Your email address will not be published. Required fields are marked *

error: Content is protected !!