ಮಂಗಳೂರು: ಬೀದಿ ನಾಯಿ ದಾಳಿ, ವ್ಯಕ್ತಿ ಮೃತ್ಯು
ಮಂಗಳೂರು: ನಾಯಿ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಮಂಗಳೂರು ಕುಂಪಲ ಎಂಬಲ್ಲಿ ನಡೆದಿದೆ.

ಕುಂಪಲ ನಿವಾಸಿ ದಯಾನಂದ (60) ಬೀದಿ ನಾಯಿ ದಾಳಿಯಿಂದ ಸಾವಿಗೀಡಾದ ವ್ಯಕ್ತಿ. ಅವರ ಮೇಲೆ ಬೀದಿನಾಯಿ ದಾಳಿ ಮಾಡಿವೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ. ಜನ ವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ದಯಾನಂದ ಅವರು ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ನಾಯಿ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ.





