ನ.30: ಅರಿಯಡ್ಕ ಉತ್ಸವ
ಪುತ್ತೂರು: ಅರಿಯಡ್ಕ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಅರಿಯಡ್ಕ ಉತ್ಸವ-2025 ವಿನೂತನ ಕಾರ್ಯಕ್ರಮ ನ.30ರಂದು ಕೌಡಿಚ್ಚಾರ್ ಎಸ್.ಎಂ ಬಿಲ್ಡಿಂಗ್ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ನೀಡಿರುವ ಅನುದಾನಗಳ ಅನಾವರಣ ನಡೆಯಲಿದ್ದು ಹಿರಿಯ ಕಾರ್ಯಕರ್ತರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಶಾಸಕ ಅಶೋಕ್ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸಹಿತ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಭಾಗವಹಿಸಿದವರಿಗೆ ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ಅರಿಯಡ್ಕ ಗ್ರಾಮದಲ್ಲಿ ಹಬ್ಬದ ರೀತಿಯಲ್ಲಿ ಅರಿಯಡ್ಕ ಉತ್ಸವವನ್ನು ಮಾಡಲಾಗುವುದು ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದ್ದಾರೆ.



