ಕರಾವಳಿಕ್ರೈಂ

ಮಂಗಳೂರು: ಮೂವರು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು

ಮಂಗಳೂರು: ಬಜ್ಪೆಯ ಪಟಾಕಿ ಅಂಗಡಿಗಳಿಗೆ ಹೋಗಿ ಅಲ್ಲಿದ್ದವರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ KCOCA ಪ್ರಕರಣ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ




ಆರೋಪಿಗಳಾದ ಪ್ರಶಾಂತ್, ಗಣೇಶ್ ಮತ್ತು ಅಶ್ವಿತ್ ಬಜ್ಜೆಯ ಪಟಾಕಿ ಮಾರಾಟ ಮಳಿಗೆಗಳಿಗೆ ತೆರಳಿ, ನಾವು ಹಣ ಕೊಡುವುದಿಲ್ಲ ಆದರೆ ಪಟಾಕಿ ಕೊಡಲೇಬೇಕು ಎಂದು ಬೆದರಿಸಿ ಸುಲಿಗೆ ಮಾಡಿದ್ದಾರೆ. ಈ ಘಟನೆ ಅ.22ರಂದು ನಡೆದಿತ್ತು. ಪ್ರಶಾಂತ್ ವಿರುದ್ಧ 14 ಪ್ರಕರಣಗಳಿದ್ದು, ಒಂದು ಕೊಲೆ ಮತ್ತು ನಾಲ್ಕು ಕೊಲೆಯತ್ನ ಪ್ರಕರಣಗಳು ಸೇರಿದಂತೆ ತನಿಖೆ ಮತ್ತು ವಿಚಾರಣೆಯ ವಿವಿಧ ಹಂತಗಳಲ್ಲಿ ಪ್ರಶಾಂತ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣಗಳಲ್ಲಿ ಕೆಲವು ಖುಲಾಸೆಗೊಂಡಿವೆ.

ಗಣೇಶ್ ವಿರುದ್ಧ 4 ಪ್ರಕರಣಗಳಿವೆ, ಇದರಲ್ಲಿ ಎರಡು ಕೊಲೆಯತ್ನ ಪ್ರಕರಣಗಳು ತನಿಖೆ ಮತ್ತು ವಿಚಾರಣೆಯ ವಿವಿಧ ಹಂತಗಳಲ್ಲಿವೆ. ಅವುಗಳಲ್ಲಿ 3 ಪ್ರಕರಣಗಳನ್ನು ಮೊದಲೇ ಖುಲಾಸೆಗೊಳಿಸಲಾಗಿದೆ. ಅಶ್ವಿತ್ ವಿರುದ್ಧ ಒಂದು ಪ್ರಕರಣವಿದ್ದು, ಅದನ್ನು ಖುಲಾಸೆಗೊಳಿಸಲಾಗಿದೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಅವರು ಮೇಲಿನ ಇಬ್ಬರು ಅಪರಾಧಿಗಳೊಂದಿಗೆ ಭಾಗಿಯಾಗಿದ್ದರಿಂದ, ಅಶ್ವಿತ್ ಸಹ ಅವರ ಗ್ಯಾಂಗ್‌ನ ಸದಸ್ಯರಾಗಿ ಸ್ವಯಂಚಾಲಿತವಾಗಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!