ಬೈಕ್-ಕಾರು ನಡುವೆ ಅಪಘಾತ: ಬೈಕ್ ಸವಾರ ಮೃತ್ಯು
ಬೆಳ್ತಂಗಡಿ: ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಉಜಿರೆ-ಧರ್ಮಸ್ಥಳ ರಸ್ತೆಯ ಕನ್ಯಾಡಿ ಸೇವಾಧಾಮದ ಸಮೀಪ ಬುಧವಾರ ನಡೆದಿದೆ.

ಮೃತ ಬೈಕ್ ಸವಾರನನ್ನು ನಾವೂರು ಗ್ರಾಮದ ಹೊಡಿಕ್ಕಾರು ಚಂದ್ರಹಾಸ (28) ಎಂದು ಗುರುತಿಸಲಾಗಿದೆ.
ಚಂದ್ರಹಾಸ ತನ್ನ ಬೈಕ್‌ನಲ್ಲಿ ಸತೀಶ್ ಎಂಬವರ ಜೊತೆ ಬೆಳಗ್ಗೆ ಧರ್ಮಸ್ಥಳ ಕಡೆ ಕೆಲಸಕ್ಕಾಗಿ ಹೋಗುತ್ತಿರುವ ಸಂದರ್ಭ ಸೇವಾಧಾಮದ ಸಮೀಪ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆಗೆ ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟ ಚಂದ್ರಹಾಸ್ ಗಂಭೀರ ಗಾಯಗೊಂಡಿದ್ದು, ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.





