ಕರಾವಳಿ

ಡಾ. ನುಶ್ರತ್‌ಗೆ ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪ್ರದಾನ

ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆಯ ಡಾ. ನುಶ್ರತ್ ರವರು ಎಂ.ಕಾಂ., ಬಿ.ಎಡ್., ಪಿಜಿಡಿಎಚ್‌ಆರ್‌ಎಂ ವ್ಯಾಸಂಗ ಪೂರ್ತಿಗೊಳಿಸಿ ಇದೀಗ ಮಹತ್ತರ ಮೈಲಿಗಲ್ಲು ದಾಟಿದ್ದಾರೆ. ಪ್ರತಿಷ್ಠಿತ ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಪಾಂಡೇಶ್ವರದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆಂಡ್ ಕಾಮರ್ಸ್‌ನಿಂದ ಡಾಕ್ಟರ್ ಆಫ್ ಫಿಲಾಸಫಿ (ಪಿ. ಎಚ್ ಡಿ)  ಪದವಿಯನ್ನು ಇವರಿಗೆ ಪ್ರದಾನ ಮಾಡಲಾಗಿದೆ.

“ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಸರ್ಕಾರಿ ಶೈಕ್ಷಣಿಕ ಯೋಜನೆಗಳ ಬಗ್ಗೆ ಜಾಗೃತಿ ಮತ್ತು ಭಾಗವಹಿಸುವಿಕೆಯ ಮಟ್ಟವು ಸಬಲೀಕರಣವನ್ನು ಹೆಚ್ಚಿಸುವಲ್ಲಿ” ಎಂಬ ಕ್ಲಿಷ್ಟತೆಯ ವಿಷಯದ ಕುರಿತು ಅವರು ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟಾರೇಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಶೋಧನೆಯನ್ನು ಡಾ. ನಿಯಾಜ್ ಪಾನಕಜೆ ಮತ್ತು ಡಾ. ಶೈಲಶ್ರೀ ವಿ.ಟಿ. ಅವರ ಮಾರ್ಗದರ್ಶನದಲ್ಲಿ ನಡೆಸಿದ್ದಾರೆ.


ಡಾ. ನುಶ್ರತ್ ಅವರು ಉಸ್ಮಾನ್ ಹಾಜಿ ಸರಳಿಕಟ್ಟೆ ಮತ್ತು ಆಯಿಷಾ ಅವರ ಪುತ್ರಿಯಾಗಿದ್ದು ಶಕೀಲ್ ಅಹಮದ್ ಅವರ ಪತ್ನಿ.  ನನ್ನ ಈ ಸಾಧನೆಯ ಹಿಂದೆ ನನ್ನ ಗುರುಗಳ ನಿರಂತರ ಮಾರ್ಗದರ್ಶನ, ಕುಟುಂಬದ ಸದಸ್ಯರ ಪ್ರೋತ್ಸಾಹ, ಸ್ನೇಹಿತರ ಬೆಂಬಲ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸರ್ವಶಕ್ತನ ಕೃಪೆಯಿದೆ. ಈ ಯಶಸ್ಸು ನನ್ನ ಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ ಎಂದುಡಾ. ನುಶ್ರತ್ ಹೇಳಿದರು.
ಡಾ. ನುಶ್ರತ್ ಅವರು ಭಾರಕ ಇಂಟರ್‌ನ್ಯಾಷನಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!