ಕಡಬ: ಪೇಸ್ಬುಕ್ ನಲ್ಲಿ ದ್ವೇ಼ಷ ಭಾವನೆ ಉಂಟು ಮಾಡುವ ಸಂದೇಶ ಹರಡಿದ ಆರೋಪ, ಪ್ರಕರಣ ದಾಖಲು
ಕಡಬ: ಪೇಸ್ಬುಕ್ ನಲ್ಲಿ ದ್ವೇ಼ಷಭಾವನೆಯನ್ನುಂಟು ಮಾಡುವ ಸಂದೇಶ ಹರಡಿದ ಆರೋಪದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.26ರಂದು ಕಡಬ ತಾಲೂಕಿನ ರತಿನ್ ಎಂಬವರು ತನ್ನ ಮೊಬೈಲ್ನಲ್ಲಿ ಸಾಮಾಜಿಕ ಜಾಲತಾಣವಾದ ಪೇಸ್ ಬುಕ್ ವೀಕ್ಷಣೆ ಮಾಡುತ್ತಿರುವಾಗ ಪೇಸ್ಬುಕ್ ನಲ್ಲಿ Sunil Panapila ಎಂಬ ಪೇಸ್ಬುಕ್ ಅಕೌಂಟ್ ನಲ್ಲಿ ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟಾಗುವಂತೆ ಉತ್ತೇಜನ ನೀಡಿದ್ದು ಹಾಗೂ ಧಾರ್ಮಿಕ ಭಾವನೆಗಳಿಗೆ ಆಘಾತವನ್ನುಂಟು ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ದ್ವೇ಼ಷಭಾವನೆಯನ್ನುಂಟು ಮಾಡುವ ಕೃತ್ಯವನ್ನು ಸಾಮಾಜಿಕ ಜಾಲಾತಾಣದಲ್ಲಿ ಎಸಗಿರುವುದು ಕಂಡು ಬಂದಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ:55/2025.ಕಲಂ:196,299 BNS. ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





