ಕರಾವಳಿಕ್ರೈಂ

ಬಂಟ್ವಾಳ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪ: ಇಬ್ಬರ ಬಂಧನ

ಮಂಗಳೂರು: ಬೈಕ್‌ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಸಾದಿಕ್ ಹಾಗೂ ಅಬ್ದುಲ್ ಮಜೀದ್ ಬಂಧಿತ ಆರೋಪಿಗಳು.



ಬಂಧಿತರಿಂದ 88,700 ರೂ. ಮೌಲ್ಯದ 8.790 ಕಿಲೋ ಗ್ರಾಂ ಗಾಂಜಾ, 1,00,000 ರೂ. ಮೌಲ್ಯದ ಬೈಕ್ ಸೇರಿದಂತೆ ಒಟ್ಟು 2,17,460 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಬಂಟ್ವಾಳ ಪಿಎಸ್ಐ ಸಂದೀಪ್ ಕುಮಾರ್ ಶೆಟ್ಟಿ ಠಾಣಾ ವ್ಯಾಪ್ತಿಯಲ್ಲಿ ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಗೂಡಿನಬಳಿ ಸಮೀಪ ಪಾಣೆಮಂಗಳೂರು ಕಡೆಯಿಂದ ಬಿ.ಸಿ.ರೋಡು ಕಡೆಗೆ ಬೈಕ್‌ನಲ್ಲಿ ಹೆಲೈಟ್ ಧರಿಸದೆ ಬರುತ್ತಿದ್ದ ಇಬ್ಬರನ್ನು ನಿಲ್ಲಿಸಲು ಸೂಚಿಸಿದಾಗ, ಅವರು ಬೈಕನ್ನು ನಿಲ್ಲಿಸದೆ ಪರಾರಿಯಾದರು. ಈ ವೇಳೆ ಅವರನ್ನು ಬೆನ್ನಟ್ಟಿದ ಪೊಲೀಸರು ಕೈಕುಂಜೆ ರೈಲ್ವೆ ಸ್ಟೇಷನ್ ಬಳಿ ಬೈಕನ್ನು ಸುತ್ತುವರಿದು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಅವರು ಗಾಂಜಾ ಸಾಗಾಟಕ್ಕೆ ಯತ್ನಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.


ಆರೋಪಿಗಳು ಈ ಹಿಂದೆ ಪಿಕಪ್ ವಾಹನದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಇಲಾಖೆಯವರು ಬೆನ್ನಟ್ಟಿಕೊಂಡು ಬಂದಾಗ ನಂದಾವರ ಎಂಬಲ್ಲಿ ವಾಹನವನ್ನು ನಿಲ್ಲಿಸಿ ಗಾಂಜಾ ಸಮೇತ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಳಿಕ ಗಾಂಜಾವನ್ನು ಆರೋಪಿ ಅಬ್ದುಲ್ ಸಾದಿಕ್ ತನ್ನ ಸ್ನೇಹಿತ ಮಜೀದ್‌ನ ಮನೆಯಲ್ಲಿ ಇಟ್ಟಿದ್ದನು. ಅ.8ರಂದು ಗಾಂಜಾವನ್ನು ಮಾರಾಟ ಮಾಡಲು ಕೊಂಡು ಹೋಗುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳನ್ನು ಬಂಧಿಸಿರುವ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!