ಕರಾವಳಿ

ಶಾಸಕ ಅಶೋಕ್ ರೈ ಟ್ರಸ್ಟ್ ನಿಂದ ದೀಪಾವಳಿ ಆಚರಣೆ
ಪೂರ್ವಭಾವಿ ಸಭೆ


ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಅವರ ನೇತೃತ್ವದ ರೈ ಎಸ್ಟೇಟ್ಸ್ ಎಜುಕೇಶನಲ್‌ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ದೀಪಾವಳಿ ಆಚರಣೆಯ ಬಗ್ಗೆ ರೂಪುರೇಷೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಟ್ರಸ್ಟ್ ನ ಪೂರ್ವಭಾವಿ ಸಭೆಯು ಜು.10 ರಂದು ಶಾಸಕರ ಕಚೇರಿ ಸಭಾಭವನದಲ್ಲಿ ನಡೆಯಿತು.


ಟ್ರಸ್ಟ್ ಗೌರವ ಸಲಹೆಗಾರರಾದ ಸುಮಾ ಅಶೋಕ್ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ದೀಪಾವಳಿ ಆಚರಣೆ ಈ ಬಾರಿ ಯಾವ ರೀತಿಯಲ್ಲಿ ಆಚರಿಸಬೇಕು ಎಂಬ ವಿಚಾರದಲ್ಲಿ ಚರ್ಚೆ ನಡೆಸಲಾಯಿತು.‌ ಸಭೆಯಲ್ಲಿದ್ದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಅಕ್ಟೋಬರ್ ತಿಂಗಳಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.



ವಿಜೃಂಭಣೆಯಿಂದ ಈ ಬಾರಿಯೂ ಆಚರಣೆ :ಸುಮಾ ಅಶೋಕ್ ರೈ  ಮಾತನಾಡಿ ಪ್ರತೀ ವರ್ಷದಂತೆ ಈ ಬಾರಿಯೂ ವಿಜೃಂಬಣೆಯಿಂದ  ಆಚರಣೆ ಮಾಡಲಾಗುತ್ತದೆ. ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಕಳೆದ ಬಾರಿ ಸುಮಾರು 65 ಸಾವಿರ ಮಂದಿ ಭಾಗವಹಿಸಿದ್ದು ಈ ಬಾರಿ ಕಳೆದ ಬಾರಿಗಿಂದ ಹೆಚ್ಚಿನ ಜನರ ಜೊತೆಗೂಡಿ,ಸಹಭೋಜನ ನಡೆಸುವ ಮೂಲಕ ದೀಪಾವಳಿ ಆಚರಣೆ ಮಾಡಲಿದ್ದೇವೆ ಎಂದು ಟ್ರಸ್ಟ್ ಗೌರವ ಸಕಹೆಗಾರರಾದ ಸುಮಾ ಅಶೋಕ್ ರೈ ತಿಳಿಸಿದ್ದಾರೆ.


ಜನರ ಜೊತೆ ದೀಪಾವಳಿ : ಸುದೇಶ್ ಶೆಟ್ಟಿ
ಕಳೆದ12 ವರ್ಷಗಳೊಂದಿಗೆ ಶಾಸಕ ಅಶೋಕ್ ರೈ ಅವರು ತಮ್ಮ ಟ್ರಸ್ಟ್ ಮೂಲಕ ಜನರ ಜೊತೆ ಸಹಭೋಜನ ನಡೆಸುವ ಮೂಲಕ ದೀಪಾವಳಿ ಆಚರಣೆ ಮಾಡುತ್ತಿದ್ದಾರೆ. ಈ ಬಾರಿ 13 ನೇ ವರ್ಷದ ಕಾರ್ಯಕ್ರಮ. ಶಾಸಕರಾದ ಬಳಿಕ ಮೂರನೇ ದೀಪಾವಳಿ ಕಾರ್ಯಕ್ರಮ ನಡೆಯುತ್ತಿದೆ. ಕಳೆದ ಅವಧಿಯಲ್ಲಿ ಜನರಿಂದ ಉತ್ತಮ ಸ್ಪಂದನೆ ಮತ್ತು ಸಹಕಾರ ದೊರಕಿದೆ.ಈ ಬಾರಿಯೂ ಅದೇ ನಿರೀಕ್ಷೆಯಲ್ಲಿದ್ದೇವೆ. ಬಡವ,ಶ್ರೀಮಂತ,ಜಾತಿ, ಧರ್ಮದ ಎಲ್ಲೆಯನ್ನು ಮೀರಿ ಎಲ್ಲರನ್ನೂ ಸೇರಿಸಿಕೊಂಡು ಈ ಬಾರಿಯೂ ದೀಪಾವಳಿ ಆಚರಣೆ ನಡೆಯಲಿದೆ ಎಂದು ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.

ಸಭೆಯಲ್ಲಿ‌
ಟ್ರಸ್ಟ್ ಕಾರ್ಯಕಾರಿಣಿ ಸದಸ್ಯರುಗಳಾದ ನಿರಂಜನ್ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಭಟ್ ಬೊಳ್ಳಾವು, ರಿತೇಶ್ ಜೆ ಶೆಟ್ಟಿ, ಶಿವಪ್ರಸಾದ್ ರೈ ಮಟಂತಬೆಟ್ಟು, ಜಯಪ್ರಕಾಶ್ ಬದಿನಾರು, ಯೋಗೀಶ್ ಸಾಮಾನಿ, ವಿಜಯ ಚೀಮುಳ್ಳು ಉಪಸ್ಥಿತರಿದ್ದರು. ಟ್ರಸ್ಟ್ ನ ಮೆನೇಜರ್ ಲಿಂಗಪ್ಪ ಸ್ವಾಗತಿಸಿದರು. ಶಾಸಕರ ಕಚೇರಿ ಸಿಬಂದಿಗಳಾದ ಪ್ರವೀಣ್ ವಂದಿಸಿದರು .‌ಜುನೈದ್ ಬಡಗನ್ನೂರು, ರಚನಾ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!