ಅಂತಾರಾಷ್ಟ್ರೀಯ

ಇಸ್ರೇಲ್-ಹಮಾಸ್ ಕದನ ವಿರಾಮ ಯೋಜನೆಗೆ ಒಪ್ಪಂದ

ಇಸ್ರೇಲ್ ಮತ್ತು ಹಮಾಸ್ ಗಾಜಾ ಕದನ ವಿರಾಮ ಯೋಜನೆಯ ಮೊದಲ ಹಂತಕ್ಕೆ ಒಪ್ಪಂದ ಮಾಡಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಸಾಂದರ್ಭಿಕ ಚಿತ್ರ


ಟ್ರಂಪ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿರುವ ಪೋಸ್ಟ್ ನಲ್ಲಿ, “ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದ ಕದನ ವಿರಾಮದ ಮೊದಲ ಹಂತಕ್ಕೆ ಒಪ್ಪಂದ ತಲುಪಿದೆ. ಇದು ಶಾಂತಿಯ ಪ್ರಾರಂಭದ ಹೊಸ ಅಧ್ಯಾಯವಾಗಿದೆ” ಎಂದು ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಕದನ ವಿರಾಮ ಮಾತುಕತೆಯಲ್ಲಿ ಪ್ರಮುಖ ಮಧ್ಯವರ್ತಿಯಾಗಿದ್ದ ಖತರ್, “ಒಪ್ಪಂದದ ಮೊದಲ ಹಂತದ ಎಲ್ಲಾ ಷರತ್ತುಗಳು ಮತ್ತು ಅನುಷ್ಠಾನ ಕ್ರಮಗಳ ಕುರಿತು ಸ್ಪಷ್ಟತೆಗೆ ತಲುಪಲಾಗಿದೆ” ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

Leave a Reply

Your email address will not be published. Required fields are marked *

error: Content is protected !!