ಕರಾವಳಿರಾಜಕೀಯರಾಜ್ಯ

ಎಂ.ಎಸ್ ಮುಹಮ್ಮದ್ ಅವರಿಗೆ ಸೂಕ್ತ ಸ್ಥಾನಮಾನ ಚರ್ಚೆ ಮತ್ತೆ ಮುನ್ನೆಲೆಗೆ


ಪುತ್ತೂರು: ಕಾಂಗ್ರೆಸ್ ಮುಖಂಡ, ಪಕ್ಷದ ಪ್ರಮುಖ ವಾಗ್ಮಿ, ಕೆಪಿಸಿಸಿ ಕಾರ್ಯದರ್ಶಿಯೂ ಆಗಿರುವ ಎಂ.ಎಸ್ ಮುಹಮ್ಮದ್ ಅವರಿಗೆ ಪಕ್ಷದಲ್ಲಿ ಉನ್ನತ ಮಟ್ಟದ ಸ್ಥಾನಮಾನ ನೀಡುವ ವಿಚಾರದಲ್ಲಿ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಬೆನ್ನಲ್ಲೇ ಮತ್ತೊಮ್ಮೆ ಎಂ.ಎಸ್ ಮುಹಮ್ಮದ್ ವಿಚಾರ ಚರ್ಚೆಗೀಡಾಗುತ್ತಿದ್ದು ಎಂ.ಎಸ್ ಬೆಂಬಲಿಗರು ಮತ್ತು ಪಕ್ಷದ ಅನೇಕ ಕಾರ್ಯಕರ್ತರು ಎಂ.ಎಸ್ ಅವರಿಗೆ ಉನ್ನತ ಹುದ್ದೆ ಯಾವಾಗ..? ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಿಟ್ಟುಕೊಂಡಿದ್ದಾರೆ.


ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಹಗಲಿರುಳು ಪಕ್ಷಕ್ಕಾಗಿ ದುಡಿಯುವ ಎಂ.ಎಸ್ ಮುಹಮ್ಮದ್ ಅವರಿಗೆ ಸಿಗಬೇಕಾದ ಹುದ್ದೆ ಸಿಗದೇ ಅವರನ್ನು ಪಕ್ಷದಲ್ಲಿ ಕಡೆಗಣನೆ ಮಾಡಲಾಗುತ್ತಿದೆ ಎಂದು ಕೆಲವರು ಸಾಮಾಜಿಕ ತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಎಂ.ಎಸ್ ಮುಹಮ್ಮದ್ ಅವರಿಗೆ ಸೂಕ್ತ ಹುದ್ದೆ ನೀಡಬೇಕೆಂದು ಆಗ್ರಹಿಸಿ ಎಂಎಲ್‌ಸಿ ಮಂಜುನಾಥ ಭಂಡಾರಿ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಗೆ ನಿಯೋಗವೊಂದು ಹೋಗಿ ಎಂ.ಎಸ್ ಅವರ ಸುಧೀರ್ಘ ರಾಜಕೀಯ ಜೀವನ ಮತ್ತು ಅವರು ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಮನವರಿಕೆ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.


ಕಾಂಗ್ರೆಸ್ ಎಂದರೆ ತನ್ನ ಉಸಿರು ಎನ್ನುವ ಎಂ.ಎಸ್ ಮುಹಮ್ಮದ್ ಅವರಂತ ನಾಯಕರಿಗೆ ಈ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ಸಿಗದಿದ್ದರೆ ಮತ್ತೆ ಯಾವಾಗ ಸಿಗುವುದು ಎಂದು ಅವರ ಬೆಂಬಲಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರನ್ನಾಗಿ ಎಂ.ಎಸ್ ಮುಹಮ್ಮದ್ ಅವರನ್ನು ಮಾಡಬೇಕು ಎನ್ನುವ ಕೂಗು ಹಲವು ಬಾರಿ ಕೇಳಿ ಬಂದಿತ್ತು, ಬಳಿಕ ಅದು ಸಿಗದೇ ಇದ್ದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಬಹುದೆನ್ನುವ ನಿರೀಕ್ಷೆ ಇತ್ತು, ಆದರೆ ಆ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ ಎಂದು ಎಂ.ಎಸ್ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಕರಾವಳಿ ಭಾಗದ ಅಲ್ಪಸಂಖ್ಯಾತ ಸಮುದಾಯದ ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಎಂ.ಎಸ್ ಮುಹಮ್ಮದ್ ಅವರಿಗೆ ಅಪಾರ ಜನಬೆಂಬಲವಿದ್ದು ಇನ್ನಾದರೂ ಅವರಿಗೆ ಸೂಕ್ತ ಸ್ಥಾನಮಾನ ಕೊಡಿ ಎಂದು ಅವರ ಬೆಂಬಲಿಗರು ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!