ಕುರಿಯ: ಪುರೋಹಿತ ಸುರೇಶ್ ನಕ್ಷತ್ರಿತ್ತಾಯ ನೇಣು ಬಿಗಿದು ಆತ್ಮಹತ್ಯೆ
ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುರಿಯ ಗ್ರಾಮದ ಕೈಂತಿಲ ಎಂಬಲ್ಲಿ ಸೆ.15ರಂದು ನಡೆದಿದೆ. ಮೃತರನ್ನು ಕುರಿಯ ಗ್ರಾಮದ ಕೈಂತಿಲ ನಿವಾಸಿ ಪುರೋಹಿತ ಸುರೇಶ್ ನಕ್ಷತ್ರಿತ್ತಾಯ (49.ವ) ಎಂದು ಗುರುತಿಸಲಾಗಿದೆ.

ಹೊಟ್ಟೆ ನೋವು ಗುಣವಾಗಿಲ್ಲ ಎನ್ನುವ ಚಿಂತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಮೃತರ ಪತ್ನಿ ಪತ್ನಿ ರಾಧಿಕಾ ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ ಪುತ್ರರಾದ ಶೇಖರ ಮತ್ತು ವಿಶಾಖ ಅವರನ್ನು ಅಗಲಿದ್ದಾರೆ.





