ಕರಾವಳಿ

ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಪುತ್ತೂರಿನ ಕಮ್ಯೂನಿಟಿ ಸೆಂಟರ್ ನಲ್ಲಿ ನಡೆಯುತು. ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾಗಿರುವ ಆಸೀಫ್ ಪಾಪೆತಡ್ಕ ವಹಿಸಿದ್ದರು.
ಅಬ್ದುಲ್ ರಝಾಕ್ ಸಾಲ್ಮರ ಇವರ ಕಿರಾಹತ್ ಮೂಲಕ ಮಹಾಸಭೆಗೆ ಚಾಲನೆ ನೀಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿರುವ ರಿಯಾಝ್ ಶಾಂತಿಗೋಡು ಇವರು ಸ್ವಾಗತಿಸಿದರು. ಆಸೀಫ್ ಪಾಪೆತಡ್ಕ ಅಧ್ಯಕ್ಷೀಯ ಮಾತುಗಳನ್ನಾಡಿದರು. 2024-25 ರ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ರಿಯಾಝ್ ಶಾಂತಿಗೋಡು ನೆರವೇರಿಸಿದರು. ನೂತನ ಸಮಿತಿಯ ರಚನೆಗೆ ಚಾಲನೆ ನೀಡಲಾಯಿತು.


ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ 2025-26 ರ ಸಾಲಿನ ನೂತನ ಅಧ್ಯಕ್ಷರಾಗಿ ಸಿದ್ದೀಕ್ ಗಡಿಪ್ಪಿಲ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸಾಲ್ಮರ, ಉಪಾಧ್ಯಕ್ಷರಾಗಿ ನಾಸಿರ್ ಪರ್ಪುಂಜ ಹಾಗೂ ಕೋಶಾಧಿಕಾರಿಯಾಗಿ ರಿಯಾಝ್  ಶಾಂತಿಗೋಡು ಆಯ್ಕೆಗೊಂಡರು. ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳಾಗಿ ಅಜೀರ್ ಕಲ್ಲಡ್ಕ, ಆಸೀಫ್ ಪಾಪೆತ್ತಡ್ಕ, ಆರಿಸ್ ಸವನೂರು,ನೌಶಾದ್ ಕಟ್ಟತ್ತಾರ್,ಉಸ್ಮಾನ್ ಎ ಕೆ, ಸಮದ್ ಮಾಂತೂರು, ಸಾದಿಕ್ ಅರಿಯಡ್ಕ,ಇರ್ಷಾದ್ ಕಾವು ಹಾಗೂ ಫಿರೋಝ್ ಪಾಲ್ತಾಡ್ ಆಯ್ಕೆಗೊಂಡರು.
ಸಮದ್ ಮಾಂತೂರು ಸ್ವಾಗತಿಸಿ ನಾಸಿರ್ ಪರ್ಪುಂಜ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!