ಅಳುತ್ತಿದೆ ಎಂದು ಮಗುವನ್ನು ಫ್ರಿಡ್ಜ್‌ನಲ್ಲಿಟ್ಟು ನಿದ್ರಿಸಿದ ತಾಯಿ!
ಮೊರಾದಾಬಾದ್: ಮಹಿಳೆಯೊಬ್ಬರು ತನ್ನ 15 ದಿನಗಳ ಶಿಶುವನ್ನು ಫ್ರಿಡ್ಜ್‌ನಲ್ಲಿಟ್ಟು ನಿದ್ರಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ವರದಿಯಾಗಿದೆ

ವರದಿಗಳ ಪ್ರಕಾರ, ಫ್ರಿಡ್ಜ್‌ನಲ್ಲಿ ಅಳುವ ಸದ್ದು ಕೇಳಿ ಅಜ್ಜಿ ಮಗುವನ್ನು ರಕ್ಷಿಸಿದ್ದಾರೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಗು ತುಂಬಾ ಅಳುತ್ತಿತ್ತು, ಇದರಿಂದ ನನಗ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಹೀಗಾಗಿ ಫ್ರಿಡ್ಜ್‌ನಲ್ಲಿ ಇರಿಸಿದ್ದೆ’ ಎಂದು ಮಹಿಳೆ ಹೇಳಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಕುಟುಂಬ ಸದಸ್ಯರು ಮಹಿಳೆಗೆ ಕೆಟ್ಟ ದೃಷ್ಟಿ ತಗುಲಿದೆ ಎಂದು ಮಂತ್ರವಾದಿಯ ಬಳಿ ಕರೆದೊಯ್ದಿದ್ದರು. ಆದರೆ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ಕೊನೆಯಲ್ಲಿ ಮಹಿಳೆಯನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ದಾಗ ಹೆರಿಗೆ ಬಳಿಕದ ಮಾನಸಿಕ ಸಮಸ್ಯೆ ಇರುವುದು ಗೊತ್ತಾಗಿದೆ ಎಂದು ವರದಿಯಾಗಿದೆ.