ಸೆ.12: ಕೆ.ಸಿ.ಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ರಬೀಅ್-25 ಮೀಲಾದ್ ಕಾನ್ಫರೆನ್ಸ್
ಪ್ರವಾದಿ ಪೈಗಂಬರ್ ಮುಹಮ್ಮದ್ ಮುಸ್ತಫಾ (ಸ.ಅ) ರವರ 1500 ನೇ ಜನ್ಮ ದಿನಾಚರಣೆಯ ಭಾಗವಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಸೊಹಾರ್ ಝೋನ್ ಸಮಿತಿ ಅಯೋಜಿಸಲ್ಪಡುವ ಬೃಹತ್ ಮೀಲಾದ್ ಸಮಾವೇಶ ಸೆಪ್ಟೆಂಬರ್ 12ರಂದು KCF ಸೊಹಾರ್ ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪ್ರವಾದಿ ಕಾಲಾತೀತ ಮಾರ್ಗದರ್ಶಿ ಎಂಬ ಧ್ಯೇಯ ವಾಕ್ಯದೊಂದಿಗೆ ರೊಯಲ್ ಗಾರ್ಡನ್ ಹೊಟೆಲ್ ನಲ್ಲಿ ವಿಜೃಂಭಣೆಯಿಂದ ನಡೆಯಲಿರುವ ಮೀಲಾದ್ ಸಮಾವೇಶ ದಲ್ಲಿ ಉದ್ಘಾಟಕರಾಗಿ ಇಕ್ಬಾಲ್ ಹಾಜಿ ಬರ್ಕ (ಪ್ರಧಾನ ಕಾರ್ಯದರ್ಶಿ, KCF ಅಂತರಾಷ್ಟ್ರೀಯ ಸಮಿತಿ)ಮತ್ತು
ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರು ಹುಬ್ಬುರ್ರಸೂಲ್ (ಸ.ಅ) ಪ್ರಭಾಷಣ ಹಾಗೂ ಮದೀನಾದ ಮದ್ಹ್ ಗೀತೆಗಳ ಮೂಲಕ ಗುರುತಿಸಿಕೊಂಡಿರುವ ಶಿಹಾನ್ ಮಂಗಳೂರುರವರು ನಅತೇ ಶರೀಫ್ ಆಲಾಪನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಂಝ ಹಾಜಿ ಕನ್ನಂಗಾರ್, (ಅಧ್ಯಕ್ಷರು,KCF ಒಮಾನ್) ಅಯ್ಯೂಬ್ ಕೋಡಿ ( ಅಧ್ಯಕ್ಷರು,ಇಹ್ಸಾನ್ ಕರ್ನಾಟಕ KCF ಅಂತರಾಷ್ಟ್ರೀಯ ಸಮಿತಿ) ಇವರು ಭಾಗವಹಿಸಲಿದ್ದಾರೆ
ಹಾಗೂ ಪ್ರಮುಖ ಉಲಮಾ, ಉಮಾರಾ ನೇತಾರರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು
ಮೀಲಾದ್ ಸ್ವಾಗತ ಸಮಿತಿಯು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.